ಬಿಗಿ ಭದ್ರತೆಯ ತಿಹಾರ್ ಜೈಲಿನಲ್ಲೂ ಛೋಟಾರಾಜನ್ ಗೆ ಪ್ರಾಣ ಬೆದರಿಕೆ!

ವಿವಿಧ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿ ಭಾರತದಲ್ಲಿ ಬಂಧನಕ್ಕೀಡಾಗಿರುವ ಭೂಗತ ಪಾತಕಿ ಛೋಟಾ ರಾಜನ್ ಗೆ ಬೆದರಿಕೆ ಸಂದೇಶ ಬಂದಿದ್ದು, ರಾಜನ್ ವೈರಿ ಮತ್ತು ಮತ್ತೋರ್ವ ಭೂಗತ ಪಾತಕಿ ದಾವೂದ್..
ಛೋಟಾ ರಾಜನ್ ಮತ್ತು ಛೋಟಾ ಶಕೀಲ್ (ಸಂಗ್ರಹ ಚಿತ್ರ)
ಛೋಟಾ ರಾಜನ್ ಮತ್ತು ಛೋಟಾ ಶಕೀಲ್ (ಸಂಗ್ರಹ ಚಿತ್ರ)

ನವದೆಹಲಿ: ವಿವಿಧ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿ ಭಾರತದಲ್ಲಿ ಬಂಧನಕ್ಕೀಡಾಗಿರುವ ಭೂಗತ ಪಾತಕಿ ಛೋಟಾ ರಾಜನ್ ಗೆ ಬೆದರಿಕೆ ಸಂದೇಶ ಬಂದಿದ್ದು, ರಾಜನ್ ವೈರಿ ಮತ್ತು  ಮತ್ತೋರ್ವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಬಲಗೈ ಬಂಟ ಛೋಟಾ ಶಕೀಲ್ ಈ ಸಂದೇಶ ರವಾನಿಸಿದ್ದಾನೆ ಎಂದು ತಿಳಿದುಬಂದಿದೆ.

ಛೋಟಾ ಶಕೀಲ್ ಪತ್ರದಲ್ಲಿ ಶೀಘ್ರದಲ್ಲೇ ನಿನ್ನನ್ನು ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಛೋಟಾ ಶಕೀಲ್ ಬೆದರಿಕೆ ಸಂದೇಶ ಇದೀಗ ದೇಶದ ಅತ್ಯಂತ ಭದ್ರತೆ  ಇರುವ ಜೈಲು ತಿಹಾರ್ ಜೈಲಿನ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದೆ. ಮೂಲಗಳ ಪ್ರಕಾರ ತಿಹಾರ್ ಜೈಲಿನ ವಿಶೇಷ ಜೈಲು ವಿಭಾಗದ ಹಿರಿಯ ಅಧಿಕಾರಿಯೊಬ್ಬರ ಮೊಬೈಲ್ ಫೋನ್ ಗೆ  ಛೋಟಾ ಶಕೀಲ್ ತನ್ನ ಮೊಬೈಲ್ ಮೂಲಕ ಸಂದೇಶ ರವಾನಿಸಿದ್ದು, ಶೀಘ್ರದಲ್ಲಿಯೇ ರಾಜನ್ ನನ್ನು ಮುಗಿಸುವುದಾಗಿ ಹೇಳಿದ್ದಾನೆ.

"ಎಷ್ಟು ದಿನ ನೀವು ಸತ್ತ ಹಂದಿಯನ್ನು ಸಾವಿನಿಂದ ರಕ್ಷಿಸುತ್ತೀರಿ. ಶೀಘ್ರದಲ್ಲೇ ಆತನನ್ನು ಆತನ ಅಂತ್ಯವನ್ನು ನಾನು ನೋಡುತ್ತೇನೆ" ಎಂದು ಶಕೀಲ್ ಸಂದೇಶ ರವಾನಿಸಿದ್ದಾನೆ. ಕೇವಲ  ಎಸ್ಎಂಎಸ್ ಮಾತ್ರವಲ್ಲದೇ ಅದೇ ಹಿರಿಯ ಅಧಿಕಾರಿ ಮೊಬೈಲ್ ಗೆ ಕರೆಮಾಡಿರುವ ಶಕೀಲ್ ರಾಜನ್ ನನ್ನು ಮುಗಿಸಲು ತಂಡ ಸಿದ್ಧವಾಗಿದೆ ಎಂದು ಹೇಳಿದ್ದಾನೆ. ಈ ದೂರವಾಣಿ ಕರೆ ಬಳಿಕ  ರಾಜನ್ ನನ್ನು ಇಡಲಾಗಿರುವ ಜೈಲಿನ ಭದ್ರತೆ ಹೆಚ್ಚಿಸಲಾಗಿದೆ.

ದಶಕಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಛೋಟಾ ರಾಜನ್ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ, ಸುಪಾರಿ ನೀಡಿದ ಪ್ರಕರಣ ಸೇರಿದಂತೆ ಭಾರತದಲ್ಲಿ ಒಟ್ಟು 74  ಪ್ರಕರಣಗಳು ದಾಖಲಾಗಿದ್ದು, ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಪಡೆದಿದ್ದ. ಕಳೆದ ಅಕ್ಟೋಬರ್ ನಲ್ಲಿ ಭಾರತಕ್ಕೆ ಗಡಿಪಾರಾಗಿದ್ದ ಛೋಟಾರಾಜನ್ ನನ್ನು  ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಛೋಟಾ ರಾಜನ್ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಹಿಂದೆ ಮಹಾರಾಷ್ಟ್ರದ ಪೊಲೀಸರು ತನಿಖೆ ನಡೆಸುತ್ತಿದ್ದ  ರಾಜನ್ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com