ದೆಹಲಿಯಲ್ಲಿ ಡೀಸೆಲ್ ಟ್ಯಾಕ್ಸಿಗಳಿಗೆ ನಿಷೇಧ; ಆತ್ಮಹತ್ಯೆ ಬೆದರಿಕೆಯೊಡ್ಡಿದ ಟ್ಯಾಕ್ಸಿ ಮಾಲೀಕರು

ಸುಪ್ರೀಂ ಕೋರ್ಟ್ ಆದೇಶದಂತೆ ದೇಶದ ರಾಜಧಾನಿ ದೆಹಲಿಯಲ್ಲಿ ಭಾನುವಾರದಿಂದ ಡೀಸೆಲ್ ಮತ್ತು ಪೆಟ್ರೋಲ್ ಟ್ಯಾಕ್ಸಿಗಳಿಗೆ ನಿಷೇಧ ಹೇರಿದ್ದು, ಇದನ್ನು ಪ್ರತಿಭಟಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ದೇಶದ ರಾಜಧಾನಿ ದೆಹಲಿಯಲ್ಲಿ ಭಾನುವಾರದಿಂದ ಡೀಸೆಲ್ ಮತ್ತು ಪೆಟ್ರೋಲ್ ಟ್ಯಾಕ್ಸಿಗಳಿಗೆ ನಿಷೇಧ ಹೇರಿದ್ದು, ಇದನ್ನು ಪ್ರತಿಭಟಿಸಿ ಮೂವರು ಟ್ಯಾಕ್ಸಿ ಮಾಲೀಕರು ಆತ್ಮಹತ್ಯೆ ಮಾಡುವುದಾಗಿ ಸರ್ಕಾರಕ್ಕೆ ಬೆದರಿಕೆಯನ್ನೊಡ್ಡಿದ್ದಾರೆ.
 ಸುಪ್ರೀಂ ಕೋರ್ಟ್‌ನ ಈ ಆದೇಶವು ನಮ್ಮ ಮೇಲೆ ಮಾಡಿರುವ ದಬ್ಬಾಳಿಕೆಯಾಗಿದೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡಲಿದ್ದೇವೆ. ಸರ್ಕಾರ ಈ ನಿರ್ಧಾರವನ್ನು ಬದಲಿಸದೇ ಇದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಟ್ಯಾಕ್ಸಿ ಮಾಲೀಕರು ಬೆದರಿಕೆ ನೀಡಿದ್ದಾರೆ. 
ದೆಹಲಿಯಲ್ಲಿ 27,000 ಕ್ಕಿಂತಲೂ ಹೆಚ್ಚು ಟ್ಯಾಕ್ಸಿಗಳು ಡೀಸಲ್ ಇಂಧನದಿಂದ ಚಲಿಸುತ್ತಿವೆ.
ಸುದ್ದಿ ಮಾಧ್ಯಮವೊಂದರ ಜತೆ ಮಾತನಾಡಿದ ಕುಮಾರ್ ಟ್ಯಾಕ್ಸಿ ಸರ್ವೀಸಸ್ ನ ಮಾಲೀಕ ಎಸ್ ಕುಮಾರ್, ನನ್ನ ಹೆಚ್ಚಿನ ಟ್ಯಾಕ್ಸಿಗಳು ಡೀಸೆಲ್ ನಿಂದ  ಚಲಿಸುವ ಕಾರಣ ಬೆಳಗ್ಗಿನಿಂದ ನಾನು 17 ಬುಕ್ಕಿಂಗ್‌ಗಳನ್ನು ರದ್ದು ಮಾಡಿದ್ದೇನೆ. ಸರ್ಕಾರ ಮತ್ತು ಸುಪ್ರೀಂಕೋರ್ಟ್ ಇಂಥಾ  ನಿರ್ಧಾರವನ್ನು ಯಾಕೆ ಕೈಗೊಂಡಿತು ಎಂಬುದರ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. 
ಟ್ಯಾಕ್ಸಿಗಳಿಗೆ ನಿಷೇಧ ಹೇರಿರುವುದರಿಂದ ಟ್ಯಾಕ್ಸಿ ಆಪರೇಟರ್‌ಗಳಿಗೆ ಕಾರು ಇನ್‌ಸ್ಟಾಲ್‌ಮೆಂಟ್‌ನ್ನು ಪಾವತಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರು ಆಪರೇಟರ್‌ಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.
ಟ್ಯಾಕ್ಸಿ ಖರೀದಿಸಲು ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿರುತ್ತೀವಿ. ಆ ಸಾಲದ ಕಂತುಗಳನ್ನು ಹೇಗೆ ಪಾವತಿಸಲಿ? ಡೀಸೆಲ್ ಕಾರುಗಳನ್ನು ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಇಂಧನಕ್ಕೆ ಬದಲಿಸಲು ಸಾಧ್ಯವಿಲ್ಲ ಎಂಬುದು ಸರ್ಕಾರಕ್ಕೆ ತಿಳಿದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಸಾರಿಗೆ ಸಂಚಾರ ಇಲಾಖೆಯ ಪ್ರಕಾರ ದೆಹಲಿಯಲ್ಲಿ 60,000 ಟ್ಯಾಕ್ಸಿಗಳು ನೋಂದಣಿಯಾಗಿವೆ. ಇದಲ್ಲಿ 27,000 ಟ್ಯಾಕ್ಸಿಗಳು ಡೀಸೆಲ್‌ನಿಂದ ಚಲಿಸುವವುಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com