ಸಂಗಾರೆಡ್ಡಿ: ಮದುವೆ ದಿಬ್ಬಣ ಲಾರಿಗೆ ಹೈಟೆಂಕ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 15 ಮಂದಿಗೆ ಗಂಭೀರ ಗಾಯಗಳಾಗಿವೆ.
ತೆಲಂಗಾಣದ ಮೆದಕ್ ಜಿಲ್ಲೆಯ ಚೌಕನಪಲ್ಲಿ ಗ್ರಾಮದ ರಾಮ್ ಸಿಂಗ್ ತಾಂಡದ ನಿವಾಸಿ ಶಿವರಾಂ ಅವರ ಮದುವೆ ನಿಜಾಮಾಬಾದ್ ಜಿಲ್ಲೆಯ ಕಾಮರೆಡ್ಡಿ ಗ್ರಾಮದ ಮಂಜು ವಾಡ ತಾಂಡದಲ್ಲಿ ನಡೆದಿದ್ದು, ಮದುವೆ ಮುಗಿಸಿಕೊಂಡು ರಾತ್ರಿ 11 ಗಂಟೆ ಸುಮಾರಿನಲ್ಲಿ ಲಾರಿಯಲ್ಲಿ ವಾಪಸ್ಸಾಗುತ್ತಿದ್ದ ವೇಳೆ ದೇಗುಲ್ ವಾಡಿ ಗ್ರಾಮದ ಬಳಿ ಹೈ-ಟೆಂಕ್ಷನ್ ವಿದ್ಯುತ್ ತಂತಿಗೆ ಲಾರಿ ಸ್ಪರ್ಶಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ವರನ ತಂದೆ ನಂದಿ ರಾಮ್ ಸೇರಿದಂತೆ 6 ಮಂದಿ ಕುಟುಂಬ ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸೈದಾ ನಾಯ್ಕ್ ಹೇಳಿದ್ದಾರೆ.
ಲಾರಿಯಲ್ಲಿ ಸುಮಾರು 70 ಮಂದಿ ತೆರಳುತ್ತಿದ್ದು ಆ ಪೈಕಿ 7 ಮಂದಿ ಸಾವನ್ನಪ್ಪಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಗಾಯಾಳುಗಳ ಪೈಕಿ ಇಬ್ಬರು ಸ್ಥಿತಿ ಗಂಭೀರವಾಗಿದ್ದು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement