ನವದೆಹಲಿ: ನನ್ನನ್ನು ಗುರಿಯಾಗಿಸುವುದು ನನಗೆ ಖುಷಿ ತರುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರು.3,600 ಕೋಟಿ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಎಳೆದು ತಂದಿರುವ ಕುರಿತು ಪ್ರತಿಕ್ರಯಿಸಿರುವ ರಾಹುಲ್ ಗಾಂಧಿ, ನನ್ನನ್ನು ಟಾರ್ಗೆಟ್ ಮಾಡುವುದು ನನಗಿಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ನನ್ನನ್ನು ಯಾವಾಗಲೂ ಟಾರ್ಗೆಟ್ ಮಾಡಲಾಗುತ್ತದೆ. ಹಾಗಾಗಿ, ಟಾರ್ಗೆಟ್ ಆದರೆ ನನಗೆ ಖುಷಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ನಿಕಟವರ್ತಿ ಕನಿಷ್ಕ ಸಿಂಗ್ ಅವರಿಗೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಗಿಡೋ ಹ್ಯಾಶ್ಕ್ ಅವರೊಂದಿಗೆ ವ್ಯವಹಾರದ ನಂಟು ಇದೆ ಎಂದು ಕಿರಿಟ್ ಸೋಮಯ್ಯ ಆರೋಪಿಸಿದ್ದರು.