ಸಾಂದರ್ಭಿಕ ಚಿತ್ರ
ದೇಶ
ಜಿಶಾಳಿಗೆ ಕ್ರೂರ ಹಿಂಸೆ ನೀಡಿ ಅತ್ಯಾಚಾರ: ಮರಣೋತ್ತರ ವರದಿಯಿಂದ ದೃಢ
ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರು ಎಂಬಲ್ಲಿ ಏಪ್ರಿಲ್ 28ರಂದು ಹತ್ಯೆಗೀಡಾದ ಜಿಶಾ ಎಂಬ ಯುವತಿಯ ಮರಣೋತ್ತರ ವರದಿ ಬಂದಿದ್ದು...
ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರು ಎಂಬಲ್ಲಿ ಏಪ್ರಿಲ್ 28ರಂದು ಹತ್ಯೆಗೀಡಾದ ಜಿಶಾ ಎಂಬ ಯುವತಿಯ ಮರಣೋತ್ತರ ವರದಿ ಬಂದಿದ್ದು, ಆಕೆಗೆ ಕ್ರೂರ ಹಿಂಸೆ ನೀಡಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು ಎಂದು ದೃಢಪಟ್ಟಿದೆ.
ಆಕೆಯ ದೇಹದಲ್ಲಿ 38 ಗಾಯಗಳಾಗಿದ್ದವು. ಅದು ಅತ್ಯಾಚಾರವೆಸಗಿರುವುದನ್ನು ಸೂಚಿಸುತ್ತದೆ ಎಂದಷ್ಟೇ ಪೊಲೀಸರು ಹೇಳಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಕುರಿತು ಹೆಚ್ಚಿನ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಜಿಶಾಳ ಒಳಾಂಗಗಳನ್ನು ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲು ಪೊಲೀಸರು ಯೋಚಿಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ


