ಸಾಮಾಜಿಕ ತಾಣಗಳನ್ನು ಬಳಸುವಂತೆ ಕೇಂದ್ರ ಸಚಿವರಿಗೆ ಸಲಹೆ ನೀಡಿದ ಮೋದಿ

ಬಿಜೆಪಿ ಸಚಿವರು ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿಲ್ಲ ಎಂಬ ವಿಷಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ. ಕೇಂದ್ರ ಸಚಿವರ ಸಭೆಯ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಬಿಜೆಪಿ ಸಚಿವರು ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿಲ್ಲ ಎಂಬ ವಿಷಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ. ಕೇಂದ್ರ ಸಚಿವರ ಸಭೆಯ ನೇತೃತ್ವ ವಹಿಸಿದ ಮೋದಿ, ತಮ್ಮ ಸಚಿವರು ಡಿಜಿಟಲ್ ಪ್ಲಾಟ್‌ಫೋರಂ ಮೂಲಕ ಜನರನ್ನು ತಲುಪಬೇಕು ಎಂದಿದ್ದಾರೆ.
ಬಿಜೆಪಿ ಸಚಿವರು ಫೇಸ್‌ಬುಕ್ ಮತ್ತು ಟ್ವಿಟರ್‌ಗಳನ್ನು ಬಳಸಬೇಕು. ಹೀಗೆ ಸಾಮಾಜಿಕ ತಾಣಗಳನ್ನು ಬಳಸದೇ ಇರುವ ಸಚಿವರಿಗೆ ಅದನ್ನು ಹೇಳಿಕೊಡಲು ಇಂಧನ ಸಚಿವ ಪೀಯುಷ್ ಗೋಯಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಜವಾಬ್ದಾರಿಯನ್ನು ವಹಿಸಿದ್ದಾರೆ.
ಟ್ವಿಟರ್‌ನಲ್ಲಿ ಮೋದಿ ಅವರಿ 19.7 ಮಿಲಿಯನ್ ಫಾಲೋವರ್ ಗಳಿದ್ದು, ಇವರ ಫೇಸ್‌ಬುಕ್ ಪೇಜ್ ನ್ನು 3 ಕೋಟಿ ಜನ ಲೈಕ್ ಮಾಡಿದ್ದಾರೆ.
ಸರ್ಕಾರದ ಯೋಜನೆಗಳಾದ ಎಲ್‌ಪಿಜಿ ಕವರೇಜ್, ಗ್ರಾಮಗಳಳಲ್ಲಿ ವಿದ್ಯುತ್ತೀಕರಣ, ಮುದ್ರಾ ಯೋಜನೆ, ಜನ್ ಧನ್ ಯೋಜನೆ ಮೊದಲಾದವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಸಚಿವರು ಸಾಮಾಜಿಕ ತಾಣಗಳನ್ನು ಬಳಸಬೇಕೆಂದು ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com