ಕೀನನ್‌, ರೂಬೆನ್‌ ಹತ್ಯೆ ಪ್ರಕರಣ: 4 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ

ದೇಶಾದ್ಯಂತ ತಲ್ಲಣ ಮೂಡಿಸಿದ್ದ ಕೀನನ್‌ ಸಂತೋಷ್‌ ಹಾಗೂ ರೂಬೆನ್‌ ಫರ್ನಾಂಡಿಸ್‌ನ ಕೊಲೆ ಪ್ರಕರಣದ ನಾಲ್ಕು ಅಪರಾಧಿಗಳಿಗೆ ಮುಂಬಯಿ ನ್ಯಾಯಾಲಯ ...
ಕೊಲೆಯಾದ ಕೀನನ್‌ ಮತ್ತು ರೂಬೆನ್‌
ಕೊಲೆಯಾದ ಕೀನನ್‌ ಮತ್ತು ರೂಬೆನ್‌

ಮುಂಬಯಿ: ದೇಶಾದ್ಯಂತ ತಲ್ಲಣ ಮೂಡಿಸಿದ್ದ ಕೀನನ್‌ ಸಂತೋಷ್‌ ಹಾಗೂ ರೂಬೆನ್‌ ಫರ್ನಾಂಡಿಸ್‌ನ ಕೊಲೆ ಪ್ರಕರಣದ ನಾಲ್ಕು ಅಪರಾಧಿಗಳಿಗೆ ಮುಂಬಯಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ತಮ್ಮ ಗೆಳತಿಯರಿಗೆ ಕಿರುಕುಳ ನೀಡಿದ್ದನ್ನು ವಿರೋಧಿಸಿದ ಕೀನನ್‌ ಸಂತೋಷ್‌ ಹಾಗೂ ರೂಬೆನ್‌ ಫರ್ನಾಂಡಿಸ್‌ ಅವರನ್ನು,  ಜಿತೇಂದ್ರ ರಾಣಾ, ಸುನೀಲ್ ಬೋದ್, ಸತೀಶ್ ದುಲ್ಹಾಜ್, ಮತ್ತು ದೀಪಕ್ ತಿವಾಲ್ ಸೇರಿಕೊಂಡು ಕೊಲೆ ಮಾಡಿದ್ದರು.

ಅಕ್ಟೋಬರ್ 20, 2011 ರಂದು ಮುಂಬಯಿ ಉಪನಗರ ಅಂದೇರಿಯ ಅಂಬೋಲಿ ಬಾರ್‌ ಆಂಡ್‌ ಕಿಚನ್‌ ಹೊರಗೆ ಕೀನನ್‌ ಹಾಗೂ ರೂಬೆನ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಯುವಕರ ಜತೆ ಇದ್ದ ಯುವತಿಯರಿಗೆ ಕಿರುಕುಳ ನೀಡಿದ ನಂತರ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಕೀನನ್‌ ಅದೇ ದಿನ ಮೃತಪಟ್ಟರೆ, ರೂಬೆನ್‌ ಆಸ್ಪತ್ರೆಯಲ್ಲಿ 10 ದಿನಗಳ ನಂತರ ಸಾವನ್ನಪ್ಪಿದ್ದ.

ವಿಶೇಷ ನ್ಯಾಯಮೂರ್ತಿ ವೃಶಾಲಿ ಜೋಶಿ ಶಿಕ್ಷೆ ಪ್ರಕಟಿಸಿದಾಗ, ಆರೋಪಿಗಳು ಹಾಗೂ ಕೊಲೆಯಾದ ಕೀನನ್‌ (24) ಹಾಗೂ ರೂಬೆನ್‌ (29)ನ ಕುಟುಂಬ ಸದಸ್ಯರು ನ್ಯಾಯಾಲಯದಲ್ಲಿದ್ದರು. ತಾವು ಬಯಸಿದ್ದ ದೊರೆತಿದ್ದು, ತಮ್ಮ ಮಕ್ಕಳ ಆತ್ಮಕ್ಕೆ ಶಾಂತಿ ದೊರೆತಿದೆ ಎಂದು ಮೃತರ ಪೋಷಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com