ಹೆಲಿಕಾಪ್ಟರ್ ಹಗರಣದ ಕಮಿಷನ್ ಹಣದಲ್ಲಿ ಮಾಲ್ ನಲ್ಲಿ ಕಾಂಪ್ಲೆಕ್ಸ್ ಖರೀದಿಸಿದ ರಾಹುಲ್ ಗಾಂಧಿ?

ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಬಂದ ಕಮಿಷನ್ ಹಣದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸದಿಲ್ಲಿಯಲ್ಲಿ ಮಾಲ್ ಖರೀದಿಸಿದ್ದಾರೆ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಬಂದ ಕಮಿಷನ್ ಹಣದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸದಿಲ್ಲಿಯಲ್ಲಿ ಮಾಲ್ ಖರೀದಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಡೀಲ್‌ ಪ್ರಕರಣದ ದಲ್ಲಾಳಿ ಜತೆ ನಂಟು ಹೊಂದಿರುವ ಎಮಾರ್‌ - ಎಂಜಿಎಫ್ ರಿಯಲ್‌ ಎಸ್ಟೇಟ್‌ ಕಂಪನಿ ಒಡೆತನದ ದೆಹಲಿಯ ಮಾಲ್‌ವೊಂದರಲ್ಲಿ, ರಾಹುಲ್‌ ಅವರು ಎರಡು ಅಂಗಡಿ ಮಳಿಗೆಗಳನ್ನು ಖರೀದಿಸಿದ್ದಾರೆ' ಎಂದು ಬಿಜೆಪಿ ಸಂಸದ ಕಿರಿಟ್ ಸೋಮಯ್ಯ ಆರೋಪಿಸಿದ್ದಾರೆ.

2005ರಲ್ಲಿ ದಕ್ಷಿಣ ದೆಹಲ್ಲಿಯಲ್ಲಿರುವ ಇಮಾರ್-ಎಂಜಿಎಫ್ ಎಂಬ ರಿಯಲ್ ಎಸ್ಟೇಟ್ ಡೆವಲಪರ್ ಮಾಲೀಕತ್ವದ ಮಾಲ್‌ನಲ್ಲಿ ಕೆಲವು ಮಳಿಗೆಗಳನ್ನು  ರಾಹುಲ್ ಮತ್ತು ಅವರ ಬಾವ ರಾಬರ್ಟ್ ವಾದ್ರಾ ಖರೀದಿಸಿದ್ದಾರೆ. ಇಮಾರ್-ಎಂಜಿಎಫ್ ಕಂಪನಿಗೆ ಹಣಕಾಸು ನೆರವು ನೀಡಿದ ಕನಿಷ್ಕಾ ಸಿಂಗ್ ಗಾಂಧಿ-ನೆಹರೂ ಕುಟುಂಬಕ್ಕೆ ಪರಮಾಪ್ತರಾಗಿದ್ದಾರೆ. ಅಲ್ಲದೇ ಆತ ಕಾಪ್ಟರ್ ಖರೀದಿ ಹಗರಣದ ಮಧ್ಯವರ್ತಿಗೂ ಪರಮಾಪ್ತರು ಎಂದು ಹೇಳಲಾಗಿದೆ. ಕಾಪ್ಟರ್ ಖರೀದಿ ಹಗರಣಕ್ಕೆ ಸಹಾಯ ಮಾಡಿದ್ದಕ್ಕಾಗಿ ರಾಹುಲ್‌ಗೆ ಮಾಲ್‌ನಲ್ಲಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ. ಈ ಅವ್ಯವಹಾರದಲ್ಲಿ ಇಡೀ ಗಾಂಧಿ ಪರಿವಾರವೇ ಪಾಲ್ಗೊಂಡಿದೆ ಎಂದು ಕಿರಿಟ್ ಸೋಮಯ್ಯ ದೂರಿದ್ದಾರೆ.

ಆದರೆ ಈ ಎಲ್ಲಾ  ಆರೋಪಗಳನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಿರಾಕರಿಸಿದ್ದಾರೆ. ಇಮಾರ್-ಎಂಜಿಎಫ್ ಮಾಲ್‌ನಲ್ಲಿ ಮಗ ರಾಹುಲ್ ಮಳಿಗೆ ಖರೀದಿಸಿರುವುದು ನಿಜ. ಆದರೆ, ಅದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.  ಸಕ್ರಮವಾಗೇ ಈ 2 ಅಂಗಡಿಗಳನ್ನು ಖರೀದಿಸಿದ್ದು. ಈ ಬಗ್ಗೆ ಚುನಾವಣಾ ಪ್ರಮಾಣಪತ್ರದಲ್ಲೂ ಹೇಳಲಾಗಿದೆ.

ಇನ್ನೂ ಸೋಮಯ್ಯ ಆರೋಪವನ್ನು ಎಮಾರ್‌ - ಎಂಜಿಎಫ್ ಅಲ್ಲಗಳೆದಿದ್ದು, ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ರಾಹುಲ್‌ ಮಾರುಕಟ್ಟೆ ದರದಲ್ಲಿಯೇ 2005ರಲ್ಲಿ ಅಂಗಡಿ ಮಳಿಗೆಗಳನ್ನು ಖರೀದಿಸಿದ್ದರು. ಚದರಡಿಗೆ 9750 ರೂ.ನಂತೆ 1.47 ಕೋಟಿ ರೂ.ಗೆ ಅಂಗಡಿ ಮಳಿಗೆಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಅದನ್ನು ನಾವು ಮರಳಿ ಖರೀದಿಸಿಲ್ಲ. 2010ರ ಫೆಬ್ರವರಿಯಲ್ಲಿ ವರ್ಲಿ ರಿಯಾಲ್ಟಿ ಕಂಪನಿಗೆ ಮಾರಾಟ ಮಾಡಿಕೊಂಡಿದ್ದಾರೆ. ಆ ಕಂಪನಿ ಜತೆ ನಮಗೆ ಸಂಬಂಧವಿಲ್ಲ ಎಂದು ಕಂಪನಿ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com