ಎನ್ ಜಿಟಿ ಆದೇಶ ಉಲ್ಲಂಘನೆ: ರವಿಶಂಕರ್ ಗುರೂಜಿ ವಿರುದ್ಧ ನ್ಯಾಯಾಂಗ ನಿಂದನೆ?

ಹಸಿರು ನ್ಯಾಯಾಧಿಕರಣ ಪೀಠದ ಆದೇಶ ಉಲ್ಲಂಘಿಸಿದ ಆರೋಪದ ಮೇರೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ರವಿ ಶಂಕರ್ ಗುರೂಜಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ...
ರವಿಶಂಕರ್ ಗುರೂಜಿ ಮತ್ತು ಸಾಂಸ್ಕೃತಿಕ ಉತ್ಸವ (ಸಂಗ್ರಹ ಚಿತ್ರ)
ರವಿಶಂಕರ್ ಗುರೂಜಿ ಮತ್ತು ಸಾಂಸ್ಕೃತಿಕ ಉತ್ಸವ (ಸಂಗ್ರಹ ಚಿತ್ರ)

ನವದೆಹಲಿ: ಹಸಿರು ನ್ಯಾಯಾಧಿಕರಣ ಪೀಠದ ಆದೇಶ ಉಲ್ಲಂಘಿಸಿದ ಆರೋಪದ ಮೇರೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ರವಿ ಶಂಕರ್ ಗುರೂಜಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ರವಿಶಂಕರ್ ಗುರೂಜಿ ಅವರು ಸ್ಥಾಪಿಸಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ 35 ವರ್ಷ ತುಂಬಿದ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಕಳೆದ ಮಾರ್ಚ್ 11ರಿಂದ 13ರವೆರೆಗೆ ಮೂರು ದಿನಗಳ ಕಾಲ ಬೃಹತ್ ಸಾಂಸ್ಕೃತಿಕ ಉತ್ಸವ ನಡೆಸಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹಸಿರು ನ್ಯಾಯಾಧಿಕರಣ, ಬೃಹತ್ ವೇದಿಕೆ ನಿರ್ಮಾಣದಿಂದ ಅಲ್ಲಿನ ಜೈವಿಕ ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ ಸಂಸ್ಥೆ 5 ಕೋಟಿ ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು.

ಈ ಆದೇಶಕ್ಕೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದ ಆರ್ಟ್ ಆಪ್ ಲಿವಿಂಗ್ ಬಳಿಕ ದಂಡ ಪಾವತಿಗೆ ಒಪ್ಪಿಗೆ ನೀಡಿತ್ತು. ಆದರೆ ಆರಂಭದಲ್ಲಿ 25 ಲಕ್ಷ ಪಾವತಿ ಮಾಡಿದ್ದ ಆರ್ಟ್ ಆಫ್ ಲಿವಿಂಗ್ ಉಳಿದ  4.75 ಕೋಟಿ ಹಣವನ್ನು ಪಾವತಿ ಮಾಡಿರಲಿಲ್ಲ. ಬಳಿಕ ನಡೆದ ವಿಚಾರಣೆಯಲ್ಲಿ ಸಂಸ್ಥೆಯ ಕೋರಿಕೆ ಮೇರೆಗೆ ಎನ್ ಜಿಟಿ ಗಡುವನ್ನು ಮತ್ತೆ ಮೂರು ವಾರಗಳ ಕಾಲ ಮುಂದೂಡಿತ್ತು. ಅದರಂತೆ ಇದೇ ಏಪ್ರಿಲ್ 1ರಂದು ಈ ಗಡುವು ಕೂಡ ಮುಕ್ತಾಯವಾಗಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥೆ ದಂಡ ಪಾವತಿ ಮಾಡಿಲ್ಲ.

ಈ ಬಗ್ಗೆ ವಕೀಲ ಸಂಜಯ್ ಪರಿಖ್ ಎಂಬುವವರು ಹಸಿರು ನ್ಯಾಯಾಧಿಕರಣಕ್ಕೆ ದೂರು ನೀಡಿದ್ದರು. ಹಸಿರು ನ್ಯಾಯಾಧಿಕರಣ ನ್ಯಾಯಮೂರ್ತಿ ಸಾವಂತ್  ಕುಮಾರ್ ಅವರು ಸಂಜಯ್ ಪರಿಖ್  ಅವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದು, ಮೇ 10 ರಂದು ಪ್ರಕರಣದ ಅಂತಿಮ ತೀರ್ಪು ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com