ಅಮ್ಮಂದಿರ ದಿನಕ್ಕೆ ಫೇಸ್ ಬುಕ್ ನಲ್ಲಿ ಹೂವಿನ ಉಡುಗೊರೆ

ನಾಳೆ(ಮೇ 8) ವಿಶ್ವ ಅಮ್ಮಂದಿರ ದಿನ. ಮಕ್ಕಳು ತಮ್ಮ ಅಮ್ಮಂದಿರ ದಿನಾಚರಣೆಯನ್ನು ಆಚರಿಸಲು ಹಲವು ರೀತಿಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಾಳೆ(ಮೇ 8) ವಿಶ್ವ ಅಮ್ಮಂದಿರ ದಿನ. ಮಕ್ಕಳು ತಮ್ಮ ಅಮ್ಮಂದಿರ ದಿನಾಚರಣೆಯನ್ನು ಆಚರಿಸಲು ಹಲವು ರೀತಿಯಲ್ಲಿ ಐಡಿಯಾಗಳನ್ನು ಹಾಕುತ್ತಿರಬಹುದು.

ಪ್ರಮುಖ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅಮ್ಮಂದಿರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಮುಂದಾಗಿದೆ. ಫೇಸ್ ಬುಕ್ ಬಳಸುವವರು ಮೆಸೆಂಜರ್ ಮೂಲಕ ಹೂವಿನ ವಿಶಿಷ್ಟ ಶುಭಾಶಯಗಳನ್ನು ತಮ್ಮ ತಾಯಂದಿರಿಗೆ ಕಳುಹಿಸಬಹುದು.

ಇಂದಿನಿಂದ ನಾಡಿದ್ದು ಅಂದರೆ ಮೇ 9ರವರೆಗೆ ನೇರಳೆ ಬಣ್ಣದ ಹೂವಿನ ಗುರುತು ಮೆಸೆಂಜರ್ ನಲ್ಲಿ ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ ನಿಮ್ಮ ಸಂದೇಶ, ಫೋಟೋ, ಗಿಫ್ಟ್ ಗಳನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಬಹುದು. ನೀವು ಯಾರಿಗೆ ಸಂದೇಶ ಕಳುಹಿಸುತ್ತೀರೋ ಅವರಿಗೆ ಅಲಂಕೃತ ಸಂದೇಶವನ್ನು ಫೇಸ್ ಬುಕ್ ನಲ್ಲಿ ನೋಡಲು ಸಾಧ್ಯವಾಗುತ್ತದೆ.

ಈ ಸಂದೇಶವನ್ನು ನಿಮ್ಮ ಹೆತ್ತ ತಾಯಿಗೆ, ತಾಯಿಯಂತೆ ಗೌರವಿಸುವ ಮಹಿಳೆಗೆ ಅಥವಾ ನಿಮ್ಮ ವಿಶೇಷ ಸ್ನೇಹಿತರಿಗೆ ಕಳುಹಿಸಿ ಸಂತೋಷ ಹಂಚಿಕೊಳ್ಳಬಹುದು ಎಂದು ಫೇಸ್ ಬುಕ್ ಮೆಸೆಂಜರ್ ಪೋಸ್ಟ್ ನಲ್ಲಿ ತಿಳಿಸಿದೆ. ಇದಲ್ಲದೆ ಫೇಸ್ ಬುಕ್ ತಾಯಂದಿರ ದಿನದ ಅಂಗವಾಗಿ ಮದರ್ಲಿ ಲವ್ ಎಂಬ ಹೊಸ ಸ್ಟಿಕ್ಕರ್ ನ್ನು ಪರಿಚಯಿಸಿದೆ. ಈ ವಿಶೇಷ ಮೆಸೆಂಜರ್ ಭಾರತ ಸೇರಿದಂತೆ 82 ರಾಷ್ಟ್ರಗಳಲ್ಲಿ ಮೇ 9ರವರೆಗೆ ಚಾಲ್ತಿಯಲ್ಲಿರುತ್ತದೆ.

ಫೇಸ್ ಬುಕ್ ಲೈಕ್ ಬಟನ್ ನ್ನು ವಿಸ್ತರಿಸಿದ ಮೂರು ತಿಂಗಳ ನಂತರ ಅಮ್ಮಂದಿರ ದಿನ ಪ್ರಯುಕ್ತ ವಿಶೇಷ ಲಕ್ಷಣವನ್ನು ಬಳಕೆದಾರರಿಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com