ಪನಾಮಾ ಲೀಕ್ಸ್: ಕೇಂದ್ರ, ಸಿಬಿಐಗೆ ನೋಟೀಸ್ ನೀಡಿದ ಸುಪ್ರೀಂ

ಪನಾಮಾ ಪೇಪರ್ಸ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ಪನಾಮಾ ಪೇಪರ್ಸ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟೀಸ್ ಜಾರಿ ಮಾಡಿದೆ. 
ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಶಿವ ಕೀರ್ತಿ ಸಿಂಗ್ ಅವರನ್ನೊಳಗೊಂಡ ನ್ಯಾಯಾಪೀಠ, ಪನಾಮ ಪೇಪರ್ಸ್ ಸೋರಿಕೆ ಪ್ರಕರಣ ಸಂಬಂಧ ಪ್ರತ್ರಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ನೋಟೀಸ್ ಜಾರಿಗೊಳಿಸಿದೆ. 
ತೆರಿಗೆ ವಂಚಿಸಿ ವಿದೇಶದಲ್ಲಿ ಹಣ ಹೂಡಿದ್ದಾರೆ ಎಂದು ಪನಾಮಾ ಪೇಪರ್ಸ್ ವರದಿ ವಿಶ್ವದ ಪ್ರಭಾವಿ ವ್ಯಕ್ತಿಗಳ ದಾಖಲೆಗಳನ್ನು ಬಹಿರಂಗ ಮಾಡಿದ್ದು, ಅದರಲ್ಲಿ 500 ಭಾರತೀಯರ ಹೆಸರೂ ಇದೆ ಎಂದು ಕೇಳಿ ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕುರಿತು ತನಿಖೆ ನಡೆಸಲು ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚಿಸಿತ್ತು.
ಈ ಪ್ರಕರವನ್ನು ಸಿಬಿಐಗೆ ವಹಿಸಬೇಕು ಕೋರಿ ಎಂದು ವಕೀಲ ಎಂ ಎಲ್ ಶರ್ಮಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com