ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್‍ಯುವಿ ಕಾರುಗಳ ನೋಂದಣಿ ನಿಷೇಧ ಮುಂದಿನ ಆದೇಶದವರೆಗೆ ಮುಂದುವರೆಯಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಇದೇ ವೇಳೆ ಅಖಿಲ ಭಾರತ ಪ್ರವಾಸಿ ಅನುಮತಿ ಪಡೆದ ಡೀಸೆಲ್ ಟ್ಯಾಕ್ಸಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಮಾರ್ಚ್ 31ರವರೆಗೆ ದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಕಾರುಗಳ ನೋಂದಣಿಗೆ ನಿಷೇಧ ಹೇರಿತ್ತು. ನಂತರ ಅದನ್ನು ಏಪ್ರಿಲ್ 30ಕ್ಕೆ ಮುಂದೂಡಿತ್ತು. ಇದೀಗ ಮತ್ತೆ ಮುಂದೂಡಿದೆ.
ವಾಯುಮಾಲಿನ್ಯದಿಂದ ಜನರ ಬದುಕೇ ದುಸ್ತರವಾಗಿದೆ. ಆದರೆ, ನೀವು ಕಾರುಗಳ ಮಾರಾಟದಲ್ಲೇ ಆಸಕ್ತಿ ವಹಿಸುತ್ತಿದ್ದೀರಿ ಎಂದು ಡೀಲರ್‍ಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಕೋರ್ಟ್, ಶ್ರೀಮಂತರು ವಾತಾವರಣವನ್ನು ಮಲಿನಗೊಳಿಸುತ್ತಾ ಎಸ್‍ಯುವಿಗಳಲ್ಲಿ ಸಂಚರಿಸುವ ಅಗತ್ಯವಿಲ್ಲ ಎಂದು ಹೇಳಿತ್ತು.