ಚಿಕಿತ್ಸೆ ವೇಳೆ ನೀಡಿದ ರಕ್ತದಿಂದ ಬಾಲಕನಿಗೆ ಎಚ್ ಐವಿ ಸೋಂಕು

ಸುಟ್ಟ ಗಾಯಕ್ಕೆ ಚಿಕಿತ್ಸೆ ಪಡೆಯುವ ವೇಳೆ ರಕ್ತ ಪಡೆದುಕೊಂಡಿರುವ ಮಗುವಿನಲ್ಲಿ ಎಚ್‌ಐವಿ ಪತ್ತೆಯಾಗಿರುವ ಘಟನೆ ಗುವಾಹಟಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ನಡೆದಿದೆ..
ಗುವಾಹಟಿ ಮೆಡಿಕಲ್ ಆಸ್ಪತ್ರೆ
ಗುವಾಹಟಿ ಮೆಡಿಕಲ್ ಆಸ್ಪತ್ರೆ

ಗುವಾಹಟಿ: ಸುಟ್ಟ ಗಾಯಕ್ಕೆ ಚಿಕಿತ್ಸೆ ಪಡೆಯುವ ವೇಳೆ ರಕ್ತ ಪಡೆದುಕೊಂಡಿರುವ ಮಗುವಿನಲ್ಲಿ ಎಚ್‌ಐವಿ ಪತ್ತೆಯಾಗಿರುವ ಘಟನೆ ಗುವಾಹಟಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ನಡೆದಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಮೂರುವರೆ ವರ್ಷದ ಮಗುವನ್ನು ಶೇ 40ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಿ 5 ತಿಂಗಳು ಚಿಕಿತ್ಸೆ ಪಡೆಯಲಾಗಿತ್ತು. ಆಗ ಆರು ಬಾರಿ ರಕ್ತ ನೀಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಸ್ವಲ್ಪ ಸಮಯದ ಬಳಿಕ ಬಂದು ಸಾಮಾನ್ಯ ರಕ್ತ ತಪಾಸಣೆ ನಡೆಸಿದಾಗ ಎಚ್‌ಐವಿ ಪತ್ತೆಯಾಗಿದೆ.

ನನ್ನ ಮತ್ತು ಪತಿ ಎಚ್‌ಐವಿ ನೆಗೆಟಿವ್, ಆದರೆ ಮಗುವಿನಲ್ಲಿ ಎಚ್‌ಐವಿ ಪತ್ತೆಯಾಗಿದೆ. ಮಗುವಿಗೆ ಆಸ್ಪತ್ರೆಯಲ್ಲಿ ಆರು ಬಾರಿ ರಕ್ತ ನೀಡಲಾಗಿದೆ ಎಂದರೆ ಸುಮ್ಮನಿರುವಂತೆ ಆಸ್ಪತ್ರೆಯವರು ಹೇಳುತ್ತಾರೆ ಎಂದು ಹಜೊ ನಿವಾಸಿಯಾಗಿರುವ ತಾಯಿ ಹೇಳಿದ್ದಾರೆ. ವಿಷಯ ತಿಳಿದ ಆಸ್ಪತ್ರೆ ತಕ್ಷಣ ತನಿಖೆಗೆ ಆದೇಶಿಸಿದೆ.

ಸಂಸ್ಥೆಯು ಪ್ರತಿ ರಕ್ತ ಮಾದರಿಯನ್ನು ಎಚ್ಚರಿಕೆಯಿಂದ ಪರೀಕ್ಷಿಸುತ್ತದೆ. ಈ ಘಟನೆ ಹೇಗೆ ನಡೆಯಿತು ಎಂಬುದು ತಿಳಿಯುತ್ತಿಲ್ಲ ಎಂದು ಅಧೀಕ್ಷಕ ಬೆ.ಕೆ. ಬೆಜ್ಬರುವಾ ಹೇಳಿದ್ದಾರೆ.

ಆಸ್ಪತ್ರೆಯಿಂದ ಹೋದಾಗ ಮಗುವಿನ ಗಾಯ ಪೂರ್ಣ ವಾಸಿಯಾಗಿರಲಿಲ್ಲ, ಹೀಗಾಗಿ ಮಗು ಎಚ್‌ಐವಿ ಪೊಸೆಟಿವ್ ವ್ಯಕ್ತಿಯ ಸಂಪರ್ಕದಿಂದ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಆಸ್ಪತ್ರೆಯಿಂದ ಹೋಗಿ ತುಂಬ ಸಮಯದ ಬಳಿಕ ಮತ್ತೆ ಬಂದಾಗ ಮಗುವಿನಲ್ಲಿ ಎಚ್‌ಐವಿ ಪತ್ತೆಯಾಗಿದೆ ಎಂದು ಅಧೀಕ್ಷಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com