ವಿಶ್ವಾಸಮತ ಗೆದ್ದ ರಾವತ್; ರಾಷ್ಟ್ರಪತಿ ಆಡಳಿತ ಹಿಂಪಡೆದ ಕೇಂದ್ರ ಸರ್ಕಾರ

ನಿರೀಕ್ಷೆಯಂತೆಯೇ ಉ.ಖಂಡದಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಸ್ಪಷ್ಟಬಹುತಮತ ಪಡೆದಿದ್ದು, ಈ ಹಿಂದೆ ರಾಜ್ಯದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ.
ಹರೀಶ್ ರಾವತ್ (ಸಂಗ್ರಹ ಚಿತ್ರ)
ಹರೀಶ್ ರಾವತ್ (ಸಂಗ್ರಹ ಚಿತ್ರ)

ಡೆಹ್ರಾಡೂನ್: ನಿರೀಕ್ಷೆಯಂತೆಯೇ ಉತ್ತರಾಖಂಡದಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಸ್ಪಷ್ಟಬಹುತಮತ ಪಡೆದಿದ್ದು,  ಈ ಹಿಂದೆ ರಾಜ್ಯದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ.

ಉತ್ತರಾಖಂಡ ರಾಜಕೀಯ ಬಿಕ್ಕಟ್ಟಿಗ್ಗೆ ಇಂದು ಸುಪ್ರೀಂಕೋರ್ಟ್ ಅಧಿಕೃತ ತೆರೆ ಎಳೆದಿದ್ದು, ನಿನ್ನೆ ನಡೆದ ವಿಶ್ವಾಸ ಮತ ಯಾಚನೆ ಫಲಿತಾಂಶವನ್ನು ಇಂದು ಘೋಷಣೆ ಮಾಡಿದೆ. ವಿಶ್ವಾಸಮತ  ಯಾಚನೆಯಲ್ಲಿ ಒಟ್ಟು 61 ಊರ್ಜಿತ ಮತಗಳ ಪೈಕಿ ಹರೀಶ್ ರಾವತ್ ನೇತೃತ್ವದ ಸರ್ಕಾರದ ಪರವಾಗಿ 33 ಮತಗಳು ಬಿದ್ದಿದ್ದು, ಹರೀಶ್ ರಾವತ್ ಅವರಿಗೆ ಸ್ಪಷ್ಟಬಹುಮತ ಲಭಿಸಿದೆ. ಆ  ಮೂಲಕ ಉತ್ತರಾಖಂಡದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಮುಂದುವರೆಯಲಿದೆ.

ಅತ್ತ ಸುಪ್ರೀಂಕೋರ್ಟ್ ನಲ್ಲಿ ವಿಶ್ವಾಸ ಮತ ಯಾಚನೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಇತ್ತ ಕೇಂದ್ರ ಸರ್ಕಾರ ಉತ್ತರಾಖಂಡದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು  ಹಿಂತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ರಾಷ್ಟ್ರಪತಿಗಳ ಆಂಕಿತ ಬಾಕಿ ಇದ್ದು, ರಾಷ್ಟ್ರಪತಿಗಳ ಅಂಕಿತದ ಬಳಿಕ ಮತ್ತೆ ಹರೀಶ್ ರಾವತ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಒಟ್ಟು 71 ಸಂಖ್ಯಾಬಲದ  ಉತ್ತರಾಖಂಡ ವಿಧಾನಸಭೆಯಲ್ಲಿ ನಿನ್ನೆ 61 ಶಾಸಕರು ಮಾತ್ರ ಮತಚಲಾಯಿಸಿದ್ದರು. ಪಕ್ಷಾಂತರ ಆರೋಪದಡಿ 10 ಬಂಡಾಯ ಶಾಸಕರನ್ನು ಮತದಾನದಿಂದ ದೂರವಿಡಲಾಗಿತ್ತು. ಉತ್ತರಾಖಂಡದಲ್ಲಿ ಏರ್ಪಟ್ಟಿದ್ದ ರಾಜಕೀಯ ಬಿಕ್ಕಟ್ಟಿನಿಂದಾಗ ಕಳೆದ ಮಾರ್ಚ್ 27ರಂದು ಕೇಂದ್ರ ಸರ್ಕಾರ ಉತ್ತರಾಖಂಡ ಸರ್ಕಾರವನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com