ಗಯಾ ಪ್ರಕರಣವನ್ನುದ್ದೇಶಿಸಿ ಬಿಹಾರ್‌ನ್ನು ಜಂಗಲ್ ರಾಜ್‌ ಎನ್ನುವುದಾದರೆ, ಮಧ್ಯಪ್ರದೇಶದ ವ್ಯಾಪಂ ಹಗರಣದ ಬಗ್ಗೆ ಏನೆನ್ನುತ್ತೀರಿ?

ಗಯಾದಲ್ಲಿ ಜೆಡಿಯು ಎಂಎಲ್‌ಸಿಯ ಮಗನ ಕಾರು ಓವರ್‌ಟೇಕ್ ಮಾಡಿದ್ದಕ್ಕೆ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯ ಬಗ್ಗೆ ವಿಪಕ್ಷಗಳು ಬಿಹಾರ...
ತೇಜಸ್ವಿ ಯಾದವ್
ತೇಜಸ್ವಿ ಯಾದವ್
ನವದೆಹಲಿ: ಗಯಾದಲ್ಲಿ ಜೆಡಿಯು ಎಂಎಲ್‌ಸಿಯ ಮಗನ ಕಾರು ಓವರ್‌ಟೇಕ್ ಮಾಡಿದ್ದಕ್ಕೆ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯ ಬಗ್ಗೆ ವಿಪಕ್ಷಗಳು ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. 
ಬುಧವಾರ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಬಿಹಾರದಲ್ಲಿ ಬೀದಿ ಜಗಳದಲ್ಲಿ ಯುವಕನನ್ನು ಗುಂಡಿಕ್ಕಿ ಕೊಂದ ಘಟನೆಯನ್ನುಲ್ಲೇಖಿಸಿ ಇಲ್ಲಿ ಜಂಗಲ್ ರಾಜ್ ಇದೆ ಎಂದು ಹೇಳುವುದಾದರೆ, ದೆಹಲಿಯಲ್ಲಿ ಅತೀ ಹೆಚ್ಚು ಬೀದಿ ಜಗಳಗಳು ನಡೆಯುತ್ತವೆ, ಹಾಗಾದರೆ ಅದೂ ಜಂಗಲ್ ರಾಜ್ ಅಲ್ಲವೇ? ಎಂದಿದ್ದಾರೆ.
ಬಿಹಾರದಲ್ಲಿ ನಿಯಮ ಮತ್ತು ಕಾನೂನು ಇವೆಯೇ?ಎಂದು ವಿಪಕ್ಷ ಬಿಜೆಪಿ ಪ್ರಶ್ನಿಸಿದ್ದಕ್ಕೆ, ಮಧ್ಯ ಪ್ರದೇಶ್ , ಹರ್ಯಾಣ, ಪಂಜಾಬ್ ಮೊದಲಾದ ಕಡೆ ಕಾನೂನು ಇಲ್ಲಿವೆ? ಎಂದು ತೇಜಸ್ವಿ ಮರು ಪ್ರಶ್ನಿಸಿದ್ದಾರೆ. 
ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ, ಪಠಾಣ್ ಕೋಟ್ ವಾಯನೆಲೆ ಮೇಲೆ ದಾಳಿ, ಜಾಟ್ ಮೀಸಲಾತಿ ವೇಳೆ ನಡೆದ ಅತ್ಯಾಚಾರ ಪ್ರಕರಣಗಳು ಇದೆಲ್ಲವೂ ಜಂಗಲ್ ರಾಜ್ ಅಲ್ಲವೇ? ಎಂದು ತೇಜಸ್ವಿ ಗರಂ ಆಗಿದ್ದಾರೆ.
ಗಯಾದಲ್ಲಿ ಎಂಎಲ್‌ಸಿ ಮಗನ ಗುಂಡಿಗೆ ಬಲಿಯಾದ ಯುವಕನ ಸಾವಿಗೆ ಖೇದ ವ್ಯಕ್ತ ಪಡಿಸಿದ ತೇಜಸ್ವಿ, ಬಿಜೆಪಿ ಬೆಂಬಲಿತ ಮಾಧ್ಯಮಗಳು ಜಂಗಲ್ ರಾಜ್ ಎಂಬ ಪದ ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com