ರಾಜಕೀಯ ಕಾರ್ಯಗಳಲ್ಲಿ ಮನೇಕಾ ಸಹಾಯ 'ಹಸ್ತ' ಬಯಸಿದ್ದ ಇಂದಿರಾ ಗಾಂಧಿ

ಆದರೆ ಮನೇಕಾಳನ್ನು ಇನ್ನಷ್ಟು ಹತ್ತಿರಕ್ಕೆ ಕರೆ ತರುವಲ್ಲಿ ಇಂದಿರಾ ವಿಫಲರಾದರು. ಮನೆಯ ವಿಚಾರಗಳಲ್ಲಿ ಸೋನಿಯಾಳೇ ಮೇಲುಗೈ ಸಾಧಿಸಿದ್ದಾಗ...
ಇಂದಿರಾ ಗಾಂಧಿ
ಇಂದಿರಾ ಗಾಂಧಿ
Updated on: 
ನವದೆಹಲಿ: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಮಗ ಸಂಜಯ್ ಸಾವಿನ ನಂತರ ತಮ್ಮ ರಾಜಕೀಯ ಕಾರ್ಯಗಳಲ್ಲಿ ಕಿರಿಯ ಸೊಸೆ ಮನೇಕಾ ಗಾಂಧಿ ಸಹಾಯ ಹಸ್ತ ಬಯಸಿದ್ದರು!
ಮನೇಕಾಳಂತೆಯೇ ಹಿರಿಯ ಮಗ ರಾಜೀವ್ ಗಾಂಧಿಯವರ ಪತ್ನಿ ಸೋನಿಯಾಳನ್ನೂ ಪ್ರೀತಿಸುತ್ತಿದ್ದ ಇಂದಿರಾ, ಸಂಜಯ್ ಸಾವಿನ ನಂತರ ಮನೇಕಾಳತ್ತ ಹೆಚ್ಚು ಒಲವು ತೋರಿಸುತ್ತಿದ್ದರು.
ಆದರೆ ಮನೇಕಾಳನ್ನು ಇನ್ನಷ್ಟು ಹತ್ತಿರಕ್ಕೆ ಕರೆ ತರುವಲ್ಲಿ ಇಂದಿರಾ ವಿಫಲರಾದರು. ಮನೆಯ  ವಿಚಾರಗಳಲ್ಲಿ ಸೋನಿಯಾಳೇ ಮೇಲುಗೈ ಸಾಧಿಸಿದ್ದಾಗ, ರಾಜಕೀಯ ವಿಷಯಗಳಲ್ಲಿ ಮನೇಕಾಳ ಜಾಣ್ಮೆಯನ್ನು ಇಂದಿರಾ ಮೆಚ್ಚಿದ್ದರು ಎಂದು ಇಂದಿರಾ ಅವರ ಕುಟುಂಬ ವೈದ್ಯ  ಕೆಪಿ ಮಾಥೂರ್ ಹೇಳಿದ್ದಾರೆ. 
ಸಫ್ದಾರ್‌ಗಂಜ್ ಆಸ್ಪತ್ರೆಯಲ್ಲಿನ ಮಾಜಿ ವೈದ್ಯರಾಗಿದ್ದ ಮಾಥೂರು ಸುಮಾರು 20 ವರ್ಷಗಳ ಕಾಲ ಇಂದಿರಾ ಗಾಂಧಿಯವರ ವೈದ್ಯರಾಗಿ ಸೇವೆ ಮಾಡಿದ್ದರು.1984ರಲ್ಲಿ ಇಂದಿರಾ ಗಾಂಧಿ ಹತ್ಯೆಗೊಳಗಾಗುವ ದಿನದ ವರೆಗೂ ಮಾಥೂರ್ ಗಾಂಧಿಯವರ ಮನೆಗೆ ಬೆಳಗ್ಗೆ ಫೋನ್ ಮಾಡುತ್ತಿದ್ದರು. ಈ ಎಲ್ಲ ವಿಷಯಗಳು 'ದ ಅನ್ ಸೀನ್ ಇಂದಿರಾ ಗಾಂಧಿ' ಪುಸ್ತಕದಲ್ಲಿ ಉಲ್ಲೇಖವಾಗಿದೆ. 
ಸಂಜಯ್ ಗಾಂಧಿಯ ಮರಣಾನಂತರದ ಕೆಲವೇ ವರ್ಷಗಳಲ್ಲಿ ಅನಿವಾರ್ಯ ಕಾರಣಗಳಿಂದ ಮನೇಕಾ, ಗಾಂಧಿಯವರ ಮನೆ ತೊರೆಯಬೇಕಾಗಿ ಬಂತು. ಇಂದಿರಾ ಅವರಿಗೆ ಮನೇಕಾಳನ್ನೇ ರಾಜಕೀಯದಲ್ಲಿ ತೊಡಗಿಸಿ, ತಮಗೆ ಸಹಾಯ ಮಾಡಲು ಆಕೆ ಪ್ರಾಪ್ತಳಾಗುವಂತೆ ಮಾಡುವ ಇಚ್ಛೆ ಇತ್ತು.
ಆದರೆ ಮನೇಕಾ ರಾಜೀವ್ ಗಾಂಧಿಯ ವಿರೋಧಿಗಳೊಂದಿಗೆ ಆಪ್ತರಾಗಿದ್ದರು. ಅಷ್ಟೇ ಅಲ್ಲದೆ ಸಂಜಯ್ ವಿಚಾರ್ ಮಂಚ್ ಎಂಬ ವೇದಿಕೆಯನ್ನೂ ಮನೇಕಾ ಹುಟ್ಟು ಹಾಕಿದರು. ಈ ಸಂಸ್ಥೆ ಸಂಜಯ್ ಗಾಂಧಿಯ ಧ್ಯೇಯಗಳನ್ನು ಮುನ್ನಡೆಸುವುದಕ್ಕಾಗಿ ಹುಟ್ಟು ಹಾಕಿದ್ದಾಗಿತ್ತು. ಈ ಸಂಸ್ಥೆಯ ಮುಖಾಂತರ ಮನೇಕಾ ಮತ್ತು ಆಕೆಯ ಆಪ್ತರು ರಾಜೀವ್ ವಿರುದ್ಧ ಕಾರ್ಯತಂತ್ರಗಳನ್ನು ಮಾಡುತ್ತಿದ್ದು, ಅಲ್ಲಿ ಏನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ ಮಾಥೂರ್. 
ರಾಜೀವ್ ಗಾಂಧಿಯನ್ನು ಮದುವೆಯಾಗಿ ಬಂದ ಸೋನಿಯಾ ಎಲ್ಲರೊಂದಿಗೂ ಪ್ರೀತಿ ಗೌರವದಿಂದಿದ್ದರು. ಕೆಲವೇ ಕಾಲಗಳಲ್ಲಿ ಸೋನಿಯಾ ಮನೆ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದರು ಎಂದು ಬರೆದಿರುವ ಮಾಥೂರ್ ಇನ್ನೊಂದು ಘಟನೆಯನ್ನೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 
ತಮಿಳ್ನಾಡಿನಲ್ಲಿ ಹಿಂದಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಕಾಲವದು. ಇಂದಿರಾ ಅವರು ಮದ್ರಾಸ್ ವಿಶ್ವ ವಿದ್ಯಾನಿಲಯಕ್ಕೆ ಭೇಟಿ ನೀಡಿದಾಗ ಹಿಂದಿ ವಿರುದ್ಧ ಘೋಷಣೆ ಕೂಗಲಾಯಿತು. ಆಗ ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಇಂದಿರಾ, ಹಿಂದಿ ಡೌನ್ ಡೌನ್ ಎಂದು ಘೋಷಣೆ ಕೂಗುವ ಬದಲು ತಮಿಳು ಅಪ್ ಅಪ್ ಎಂದು ಕೂಗಿ. ನಾನು ತಮಿಳು ಕಲಿಯುತ್ತೇನೆ , ನೀವು ಹಿಂದಿ ಕಲಿಯಬಹುದು ಎಂದು ಹೇಳಿದ್ದರು. ಆಕೆ ತುಂಬಾ ಆತ್ಮ ವಿಶ್ವಾಸದ ಗಟ್ಟಿಗಿತ್ತಿ ಎಂದು ಮಾಥೂರ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com