ಶಿವಪುರಿ(ಮಧ್ಯಪ್ರದೇಶ): 40 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ವೊಂದು ಪಲ್ಪಿಯಾದ ಪರಿಣಾಮ 8 ಮಂದಿ ಸಾವನ್ನಪ್ಪಿ, 24 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.
ಟ್ರಾಕ್ಟರ್ ದಿನಾರದಿಂದ ರತನ್ ಘಡ್ ಗೆ ತೆರಳುತ್ತಿದ್ದು ಬೆಳಗ್ಗೆ 5:30 ಸುಮಾರಿಗೆ ಶಿವಪುರಿ ಜಿಲ್ಲೆಯ ದಿನಾರ ಮಾರ್ಗ್ ಬಳಿ ಪಲ್ಟಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement