ಒಂದು ವಾರ ತಡವಾಗಿ, ಜೂನ್ 7ರಂದು ಕೇರಳ ಪ್ರವೇಶಿಸಲಿರುವ ಮುಂಗಾರು: ಹವಾಮಾನ ಇಲಾಖೆ

ನೈರುತ್ಯ ಮುಂಗಾರು ಇದೀಗ ನಿಗದಿಗಿಂತ ಒಂದು ವಾರ ತಡವಾಗಿ ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನೈರುತ್ಯ ಮುಂಗಾರು ಇದೀಗ ನಿಗದಿಗಿಂತ ಒಂದು ವಾರ ತಡವಾಗಿ ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿಂದೆ ಖಾಸಗಿ ಹವಾಮಾನ ಸಂಸ್ಥೆಯೊಂದು ಮೇ 28ರಿಂದ 30ರೊಳಗೆ ಮುಂಗಾರು ಕೇರಳ ಪ್ರವೇಶಿಸಬಹುದೆಂದು ವರದಿ ಮಾಡಿತ್ತು.

ಆದರೆ ಭಾರತೀಯ ಹವಾಮಾನ ಇಲಾಖೆ ಇಂದು ಬಿಡುಗಡೆ ಮಾಡಿದ ವರದಿಯಂತೆ ಮುಂಗಾರು ಕೇರಳವನ್ನು ಸುಮಾರು ಜೂನ್ 7ರಂದು ಪ್ರವೇಶಿಸಲಿದೆ. ನಾಲ್ಕು ದಿನ ಆಚೀಚೆಯಾಗಬಹುದೆಂದು ಕೂಡ ಅದು ಹೇಳಿದೆ.

ಪುಣೆ ಭಾರತೀಯ ಹವಾಮಾನ ಇಲಾಖೆಯ ಉಪ ಮಹಾ ನಿರ್ದೇಶಕ ಎಸ್.ಪೈ, ದಕ್ಷಿಣ ಅಂಡಮಾನ್ ಸಮುದ್ರದಂಚಿಗೆ ಮೇ 17ರ ಸುಮಾರಿಗೆ ಮುಂಗಾರು ಬೀಸಲಿದ್ದು,  ಉತ್ತರ ಅಂಡಮಾನ್ ಸಮುದ್ರಕ್ಕೆ ಮೇ 20ರ ವೇಳೆಗೆ ಬೀಸಲಿದೆ. ದಕ್ಷಿಣ ಪರ್ಯಾಯ ದ್ವೀಪದಲ್ಲಿ ಉತ್ತಮ ಮಳೆ ಸುರಿಯಲಿದೆ. ನಂತರ ಬಂಗಾಳಕೊಲ್ಲಿ, ಆ ಬಳಿಕ ಮುಂಗಾರು ಕೇರಳ ಪ್ರವೇಶಿಸಲಿದೆ.

ಸಾಮಾನ್ಯವಾಗಿ ಮುಂಗಾರು ಕೇರಳ ಪ್ರವೇಶಿಸುವುದು ಜೂನ್ 1ರ ವೇಳೆಗೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com