ಇಂಡೋ-ಚೀನಾ ಗಡಿ ನಿವಾಸಿಗಳಿಗೆ ಶಂಕಾಸ್ಪದ ಕರೆ: ಹೈಅಲರ್ಟ್ ಘೋಷಣೆ

ಇಂಡೋ-ಚೀನಾ ಗಡಿ ಗ್ರಾಮದ ನಿವಾಸಿಗಳಿಗೆ ಶಂಕಿತ ಪಾಕಿಸ್ತಾನ ಅಥವಾ ಚೀನಾದ ಶಂಕಿತ ಗೂಢಚಾರರು ಕರೆ ಮಾಡಿರುವ ಕುರಿತು ಭಾರತೀಯ ಸೇನೆಗೆ ಮಾಹಿತಿ ಲಭ್ಯವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಪ್ರದೇಶದಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ..
ಗಡಿಯಲ್ಲಿ ಹೈ ಅಲರ್ಟ್ (ಸಂಗ್ರಹ ಚಿತ್ರ)
ಗಡಿಯಲ್ಲಿ ಹೈ ಅಲರ್ಟ್ (ಸಂಗ್ರಹ ಚಿತ್ರ)

ಲೇಹ್: ಇಂಡೋ-ಚೀನಾ ಗಡಿ ಗ್ರಾಮದ ನಿವಾಸಿಗಳಿಗೆ ಶಂಕಿತ ಪಾಕಿಸ್ತಾನ ಅಥವಾ ಚೀನಾದ ಶಂಕಿತ ಗೂಢಚಾರರು ಕರೆ ಮಾಡಿರುವ ಕುರಿತು ಭಾರತೀಯ ಸೇನೆಗೆ ಮಾಹಿತಿ ಲಭ್ಯವಾಗಿದ್ದು,  ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಪ್ರದೇಶದಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

ಮೂಲಗಳ ಪ್ರಕಾರ ಕಾಶ್ಮೀರದ ಲೇಹ್ ಸಮೀದ ಗ್ರಾಮದ ಸರಪಂಚ ಸೇರಿದಂತೆ ಸ್ಥಳೀಯ ನಿವಾಸಿಗಳಿಗೆ ಪಾಕಿಸ್ತಾನ ಅಥವಾ ಚೀನಾದ ಶಂಕಿತ ಗೂಡಚಾರಿಗಳಿಂದ ನೈಜ ನಿಯಂತ್ರಣ  ರೇಖೆಯಲ್ಲಿ ಭಾರತೀಯ ಸೇನೆಯ ಚಲನವಲನ ಬಗ್ಗೆ ಮಾಹಿತಿ ಕೋರಿದ ಹಲವಾರು ದೂರವಾಣಿ ಕರೆಗಳು ಬಂದ ಹಿನ್ನೆಲೆಯಲ್ಲಿ ಭಾರತ–ಚೀನಾ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು  ತಿಳಿದುಬಂದಿದೆ. ಕರ್ನಲ್ ಅಥವಾ ಸ್ಥಳೀಯ ಅಧಿಕಾರಿಗಳು ಎಂದು ಹೇಳಿಕೊಂಡು ದೂರವಾಣಿ ಕರೆಗಳನ್ನು ಮಾಡುತ್ತಿದ್ದ ವ್ಯಕ್ತಿಗಳು ಪ್ರದೇಶದಲ್ಲಿ ಸೇನೆಯ ಹಾಜರಿ, ಸೇನೆ ಸಂಚಾರದ ಸಮಯ  ಬಗ್ಗೆ ವಿಚಾರಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸಮುದ್ರ ಮಟ್ಟದಿಂದ 13,500 ಅಡಿ ಎತ್ತರದಲ್ಲಿರುವ ಚಾಂಗ್ ಲಾ ಮತ್ತು ತ್ಸಾಂಗ್ಟೆ ಗ್ರಾಮಗಳ ನಡುವಣವಿರುವ ದುರ್ಬುಕ್ ಗ್ರಾಮದ ಸರಪಂಚನೊಬ್ಬನಿಗೆ ಇಂತಹುದ ಒಂದು  ಶಂಕಾಸ್ಪದ ಕರೆ ಬಂದಿತ್ತು. ಆತ ಸೇನಾ ಶಿಬಿರದ ಸಮೀಪದಲ್ಲೇ ಇದ್ದಾಗ ಕರೆ ಮಾಡಿದ್ದ ವ್ಯಕ್ತಿ ಭಾರತೀಯ ಸೇನೆಯ ಚಲನವಲನದ ಮಾಹಿತಿ ಕೇಳಿದ್ದ. ಹೀಗಾಗಿ ಕರೆ ಮಾಡಿದ ವ್ಯಕ್ತಿ ಬಗ್ಗೆ  ಸಂಶಯಪಟ್ಟ ಸರಪಂಚ ಕರೆ ಮಾಡಿದಾತನ ಗುರುತು ಪರಿಚಯ ಕೇಳಿದ. ಜಿಲ್ಲಾಧಿಕಾರಿ ಕಚೇರಿಯಿಂದ ತಾನು ಮಾತನಾಡುತ್ತಿರುವುದಾಗಿ ಹೇಳಿದ ವ್ಯಕ್ತಿ ಸೇನೆಯ ಚಲನವಲನ ಬಗ್ಗೆ  ಪ್ರಶ್ನಿಸಿದಾಗ, ನೀವು ಸೇನಯನ್ನೇ ಸಂರ್ಪಸಿ ಎಂದು ಸರಪಂಚ ಕರೆ ಅಂತ್ಯಗೊಳಿಸಿದ್ದ.

ಆದರೆ ದೂರವಾಣಿ ಕರೆ ಬಗ್ಗೆ ಅನುಮಾನಗೊಂಡಿದ್ದ ಸರಪಂಚ ಜಿಲ್ಲಾಧಿಕಾರಿ ಕಚೇರಿಯಲ್ಲೂ ವಿಚಾರಿಸಿದಾಗ ಆ ನಂಬರಿನ ಯಾವ ವ್ಯಕ್ತಿಯೂ ಕರೆ ಮಾಡಿಲ್ಲ ಎಂದು ಗೊತ್ತಾಯಿತು. ಹೀಗಾಗಿ ಆತ  ನಂಬರ್​ನ್ನು ಸೇನಾ ಅಧಿಕಾರಿಗಳಿಗೆ ನೀಡಿದ. ಸೇನೆಯ ಉನ್ನತ ತಜ್ಞರು ಈ ಕರೆಯನ್ನು ಪರಿಶೀಲಿಸಿದಾಗ ಇದು ಕಂಪ್ಯೂಟರ್ ಮೂಲಕ ಬಂದ ಕರೆ ಎಂದು ಗೊತ್ತಾಯಿತು. ಕೇವಲ ಇದೊಂದೇ  ಅಲ್ಲ ಹಲವಾರು ಗ್ರಾಮಸ್ಥರಿಗೂ ಇದೇ ಮಾದರಿ ಕರೆಗಳು ಬಂದಿದ್ದು, ಅರಿವಿಲ್ಲದೆ ಅವರು ಮಾಹಿತಿ ಹಂಚಿಕೊಂಡದ್ದೂ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.

ಇನ್ನು ನಿನ್ನೆಯಷ್ಚೇ ಅಮೆರಿಕದ ಅಧಿಕಾರಿಗಳು ಇಂಡೋ-ಚೀನಾ ಗಡಿಯಲ್ಲಿ ಚೀನೀ ಸೈನಿಕರು ಹೆಟ್ಟಿನ ಸಂಖ್ಯೆಯಲ್ಲಿ ಜಮಾವಣೆಯಾಗುತ್ತಿದ್ದಾರೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿತ್ತು. ಈ ವರದಿ  ಬೆನ್ನಲ್ಲೇ ಇದೀಗ ಶಂಕಿತ ಗೂಢಚಾರರು ಗಡಿಗ್ರಾಮದ ಗ್ರಾಮಸ್ಥರಿಗೆ ಭಾರತೀಯ ಸೇನೆಯ ಚಲನವಲನದ ಬಗ್ಗೆ ವಿಚಾರಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು  ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com