ಕೇರಳದಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಲ್ ಡಿಎಫ್ ನಲ್ಲಿ ಈಗ ಸಿಎಂ ಗಾದಿಗಾಗಿ ಹೋರಾಟ

ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅನ್ನು ಅಧಿಕಾರದಿಂದ ದೂರವಿಡುವಲ್ಲಿ...
ವಿ.ಎಸ್.ಅಚ್ಯುತಾನಂದನ್
ವಿ.ಎಸ್.ಅಚ್ಯುತಾನಂದನ್
ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅನ್ನು ಅಧಿಕಾರದಿಂದ ದೂರವಿಡುವಲ್ಲಿ ಎಡರಂಗ ಮೈತ್ರಿಕೂಟ(ಎಲ್ ಡಿಎಫ್) ಯಶಸ್ವಿಯಾಗಿದೆ.
140 ಸ್ಥಾಗಳ ಪೈಕಿ 91 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎಲ್ ಡಿಎಫ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಆದರೆ ಇದೀಗ ಎಲ್ ಡಿಎಫ್ ನಲ್ಲಿ ಈಗ ಮುಖ್ಯಮಂತ್ರಿ ಗಾದಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. 
ಎಲ್ ಡಿಎಫ್ ನಾಯಕರಾದ ವಿ.ಎಸ್.ಅಚ್ಯುತಾನಂದನ್  ಹಾಗೂ ಪಿನರಾಯಿ ವಿಜಯನ್ ಅವರು ಮುಖ್ಯಮಂತ್ರಿಯ ರೇಸ್ ನಲ್ಲಿದ್ದಾರೆ.
ಕಮ್ಯೂನಿಸ್ಟ್ ಪಕ್ಷದ ಹಿರಿಯ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಕೇರಳದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದು, ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com