ರಾಜಸ್ತಾನದಲ್ಲಿ 51 ಡಿಗ್ರಿ ಉಷ್ಣಾಂಶ: ಸಾರ್ವಕಾಲಿಕ ದಾಖಲೆ ಬರೆದ ಭಾರತ

ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರ ಏರಿಕೆಯಾಗುತ್ತಿದ್ದು, ಗುರುವಾರ ರಾಜಸ್ಥಾನದ ಫ‌ಲೋಡಿಯಲ್ಲಿ 51...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಜೈಪುರ: ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರ ಏರಿಕೆಯಾಗುತ್ತಿದ್ದು, ಗುರುವಾರ ರಾಜಸ್ಥಾನದ ಫ‌ಲೋಡಿಯಲ್ಲಿ 51 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ದೇಶದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದೆ.
ಈ ಹಿಂದೆ 1886ರಲ್ಲಿ 50.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ದೇಶದ ಇದುವರೆಗಿನ ಅತ್ಯಧಿಕ ಉಷ್ಣತೆಯಾಗಿತ್ತು. ಆದರೆ ಗುರುವಾರ ಫ‌ಲೋಡಿ ಉಷ್ಣತೆ ಅದನ್ನು ಮೀರಿಸಿದೆ.
ಗುಜರಾತ್‌ ನ ಅಹಮದಾಬಾದ್‌ ನಗರದಲ್ಲೂ ಉಷ್ಣತೆ 48 ಡಿಗ್ರಿ ದಾಖಲಾಗಿದೆ. ಇದು 100 ವರ್ಷಗಳಲ್ಲೇ ಹೆಚ್ಚು. ಇನ್ನು ರಾಜಧಾನಿ ದೆಹಲಿ 43 ಡಿಗ್ರಿ ಉಷ್ಣಾಂಶ ದಾಖಲಿಸಿದೆ.
ರಾಜಸ್ಥಾನದ ಬಾಢಮೇರ್‌ನಲ್ಲಿ 49.6, ಗಂಗಾನಗರದಲ್ಲಿ 49.1, ಚುರುವಿನಲ್ಲಿ 50.2, ಜೈಸಲ್ಮೇರ್‌ನಲ್ಲಿ 49 ಡಿಗ್ರಿ ತಾಪ ದಾಖಲಾಗಿದ್ದು, ಬದುಕನ್ನು ಅಸಹನೀಯವಾಗಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com