ಅಸ್ಸಾಂನಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಲು ಕಾರಣವಾದ ಮಾಸ್ಚರ್ ಮೈಂಡ್ ಈ ರಜತ್ ಸೇಥಿ

ಚಹಾ ನಾಡು ಅಸ್ಸಾಂನಲ್ಲಿ ಕಮಲ ಅರಳಲು ಹಲವು ಮಂದಿ ಶ್ರಮಿಸಿರಬಹುದು. ಆದರೆ ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಅಸ್ಸಾಂ ನ ಗದ್ದುಗೆ ಒಲಿಯಲು ಯುವಕನೊಬ್ಬನ...
ರಜತ್ ಸೇಥಿ
ರಜತ್ ಸೇಥಿ
Updated on

ಗುವಾಹಟಿ: ಚಹಾ ನಾಡು ಅಸ್ಸಾಂನಲ್ಲಿ ಕಮಲ ಅರಳಲು ಹಲವು ಮಂದಿ ಶ್ರಮಿಸಿರಬಹುದು. ಆದರೆ ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಅಸ್ಸಾಂ ನ ಗದ್ದುಗೆ ಒಲಿಯಲು ಯುವಕನೊಬ್ಬನ ಪ್ರಧಾನ ಪಾತ್ರ ಇರುವುದು ಬಹಿರಂಗವಾಗಿದೆ

30 ವರ್ಷದ ಐಐಟಿ ವಿದ್ಯಾರ್ಥಿ ರಜತ್ ಸೇಥಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಮಾಡಿ ಯುವ ಸಮೂಹವನ್ನು ಸೆಳೆದಿದ್ದಾರೆ.  ನಾನು ಬಿಜೆಪಿ ಪರ ಕಾರ್ಯನಿರ್ವಹಿಸಲು ಮೂಲ ಕಾರಣ ನನ್ನ ಸಿದ್ಧಾಂತಕ್ಕೂ ಬಿಜೆಪಿಯ ವಿಚಾರಧಾರೆಗೂ ಹೋಲಿಕೆ ಇತ್ತು. ಇದು ಕೇವಲ ಏಕ ವ್ಯಕ್ತಿಯ ಕಾರ್ಯವಲ್ಲ, ನನ್ನ ಹಿಂದೆ ಹಲವಾರು ಬಿಜೆಪಿ ಕಾರ್ಯಕರ್ತರ ಪ್ರೋತ್ಸಾಹವಿತ್ತು, ದಯಮಾಡಿ ನನ್ನನ್ನು ಕಾಂಗ್ರೆಸ್ ನ ಪ್ರಶಾಂತ್ ಕಿಶೋರ್ ಗೆ ಹೋಲಿಸಬೇಡಿ ಎಂದು ಮನವಿ ಮಾಡಿದ್ದಾರೆ.

ರಜತ್ ಸೇಥಿ ಹಗಲು ರಾತ್ರಿ ಎನ್ನದೇ ಎರಡೆರಡು ಪಾಳಿಗಳಲ್ಲಿ ಕೆಲಸ ಮಾಡಿ ಅಸ್ಸಾಂ ನಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಲು ಕಾರಣವಾದರು.  28 ವರ್ಷದ ಶುಭರಾಸ್ತ ಎಂಬಾಕೆಯು ಇವರ ಕೆಲಸಕ್ಕೆ ಕೈ ಜೋಡಿಸಿದ್ರು. ಗುವಾಹಟಿಯಲ್ಲಿ ಫ್ಲಾಟ್ ವೊಂದರಲ್ಲಿ ಕುಳಿತು ಹಗಲಿರುಳು ಶ್ರಮಿಸಿದ ಕಾರಣ ಕೇವಲ 5 ಶಾಸಕರನ್ನು ಹೊಂದಿದ್ದ ಬಿಜೆಪಿ ಅಸ್ಸಾನಂ ನಲ್ಲಿ ಬಹುಮತ ಪಡೆಯುವಂತಾಯಿತು.

ಅಮೆರಿಕದಲ್ಲಿ ಪದವಿ ಮುಗಿಸಿ ಕಳೆದ ಜೂನ್​ನಲ್ಲಿ ರಜತ್ ಭಾರತಕ್ಕೆ ಆಗಮಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರಜತ್​ರನ್ನು ಭೇಟಿ ಮಾಡಿ ದೆಹಲಿಯಿಂದ ಅಸ್ಸಾಂವರೆಗೆ ಬಿಜೆಪಿ ಯುವಮೋರ್ಚಾವನ್ನು ಅಭಿವೃದ್ಧಿಪಡಿಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.

ನಮ್ಮ ಹೊಸ ಸಿದ್ದಾಂತಗಳನ್ನು ಮೊದಲಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯೋಗಿಸಲಾಯಿತು. ಅಲ್ಲಿ ಯಶಸ್ಸು ಕಂಡ ನಂತರ ಆ ತತ್ವ ಸಿದ್ದಾಂತಗಳನ್ನು ನೇರವಾಗಿ ಜನರ ಬಳಿಗೆ ಕೊಂಡೊಯ್ಯಲಾಯಿತು. ಈ ಎಲ್ಲಾ ಪ್ರಯೋಗಗಳು ನಮಗೆ ಗೆಲವು ತಂದು ಕೊಡಲು ಸಹಕಾರಿಯಾಯಿತು ಎಂದು ರಾಜೀವ್ ಸೇಥ್ ಅಭಿಪ್ರಾಯ ಪಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com