ತಮಿಳುನಾಡು ಚುನಾವಣೆಯಲ್ಲಿ ಸೋತ 6 ಪ್ರಭಾವಿ ನಾಯಕರು

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಾವೇ ಕಿಂಗ್ ಎಂದು ಹೇಳಿಕೊಂಡು ಮೆರೆದ ಕೆಲ ನಾಯಕರು ಠೇವಣಿಯನ್ನು ಕಳೆದುಕೊಂಡು ಹೀನಾಯವಾಗಿ ಸೋಲನುಭವಿಸಿದ್ದಾರೆ.
ವಿಜಯಕಾಂತ್, ಅಂಬುಮನಿ ರಾಮದಾಸ್, ತಿರುಮವಲವನ್, ವೈಕೋ, ಸೆಂಥಮಿಳನ್ ಸೀಮನ್, ರಂಗಸಾಮಿ
ವಿಜಯಕಾಂತ್, ಅಂಬುಮನಿ ರಾಮದಾಸ್, ತಿರುಮವಲವನ್, ವೈಕೋ, ಸೆಂಥಮಿಳನ್ ಸೀಮನ್, ರಂಗಸಾಮಿ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 134 ಸ್ಥಾನಗಳಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ತಮಿಳುನಾಡಿನಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಈ ಮಧ್ಯೆ ಚುನಾವಣೆ ಮುನ್ನ ತಾವೇ ಕಿಂಗ್ ಎಂದು ಹೇಳಿಕೊಂಡು ಮೆರೆದ ಕೆಲ ನಾಯಕರು ಠೇವಣಿಯನ್ನು ಕಳೆದುಕೊಂಡು ಹೀನಾಯವಾಗಿ ಸೋಲನುಭವಿಸಿದ್ದಾರೆ.

ನಟ ವಿಜಯಕಾಂತ್
ವಿಲ್ಲುಪುರಂ ಜಿಲ್ಲೆಯ ಉಲ್ಲುಂದರ್ಪೇಟ್ ಕ್ಷೇತ್ರದಲ್ಲಿ ಡಿಎಂಡಿಕೆ ಪಕ್ಷದಿಂದ ಸ್ಪರ್ಧಿಸಿ ಕೇವಲ 34,447 ಮತಗಳನ್ನು ಗಳಿಸಲಷ್ಟೇ ಸಾಧ್ಯವಾಗಿದೆ. ಇನ್ನು ಈ ಕ್ಷೇತ್ರದಲ್ಲಿ ಎಐಎಡಿಎಂಕೆ ಪಕ್ಷ ಆರ್, ಕುಮಾರಗುರು 81,973 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಕುಮಾರಗುರು ವಿರುದ್ಧ ವಿಜಯಕಾಂತ್ ಸುಮಾರು 47 ಸಾವಿರ ಮತಗಳಿಂದ ಹಿನ್ನಡೆ ಅನುಭವಿಸಿದ್ದು, ಠೇವಣಿ ಕಳೆದುಕೊಂಡಿದ್ದಾರೆ.

ಅಂಬುಮನಿ ರಾಮದಾಸ್
ಪಿಎಂಕೆ ಸಂಸ್ಥಾಪಕ ಅಬುಮನಿ ರಾಮದಾಸ್ ಸರಿಸುಮಾರು 20 ಸಾವಿರ ಮತಗಳಿಂದ ಸೋಲು ಕಂಡಿದ್ದಾರೆ.

ತಿರುಮವಲವನ್
ವಿಸಿಕೆ ಮುಖಂಡ ತಿರುಮವಲವನ್ 87 ಸಾವಿರ ಮತಗಳಿಂದ ಸೋತಿದ್ದಾರೆ.

ವೈಕೋ
ಎಂಡಿಎಂಕೆ ಪಕ್ಷದ ಮುಖಂಡ ವೈಕೋ ಸಹ ಹೀನಾಯ ಸೋಲು ಕಂಡಿದ್ದಾರೆ.

ಸೆಂಥಮಿಳನ್ ಸೀಮನ್
ಎನ್ಟಿಕೆ ನಾಯಕ ಸೆಂಥಮಿಳನ್ ಸೀಮನ್ ಸಹ ಹೀನಾಯವಾಗಿ ಸೋಲು ಕಂಡಿದ್ದು, ಠೇವಣಿ ಕಳೆದುಕೊಂಡಿದ್ದಾರೆ.

ರಂಗಸಾಮಿ
ಎಐಎನ್ಆರ್ಸಿ ಮುಖ್ಯಸ್ಥ ರಂಗಸಾಮಿ ಸಹ ಪಾಂಡಿಚೇರಿಯಲ್ಲಿ ಸೋಲು ಕಂಡ ಪ್ರಭಾವಿ ನಾಯಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com