ಇದೀಗ ನಿರ್ಣಾಯಕ ಸಭೆಯಲ್ಲಿ ಪಿಣರಾಯಿ ವಿಜಯನ್ ರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು, ಈ ಆಯ್ಕೆಗೆ ಅಚ್ಯುತಾನಂದನ್ ಸಹಮತ ಸೂಚಿಸಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ. ಅದೇ ವೇಳೆ ಎಲ್‌ಡಿಎಫ್‌ನ್ನ ನೇತೃತ್ವ ವಹಿಸಿ, ಚುನಾವಣೆ ಗೆದ್ದಿರುವ ಹಿರಿಯ ನೇತಾರ, ಕೇರಳದ ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನವನ್ನು ನೀಡಲು ತೀರ್ಮಾನಿಸಲಾಗಿದೆ.