ಪಿಣರಾಯಿ ವಿಜಯನ್ - ಸೀತಾ ರಾಂ ಯೆಚೂರಿ
ದೇಶ
ಕೇರಳ: ಸಚಿವರ ಅಂತಿಮ ಪಟ್ಟಿ ತಯಾರಿಸಿದ ಸಿಪಿಐ (ಎಂ), 8 ಮಂದಿ ಹೊಸಬರಿಗೆ ಮಣೆ
ಎಲ್‌ಡಿಎಫ್‌ನ ಪ್ರಧಾನ ಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ, ಕೇರಳದ ನೂತನ ಸಚಿವ ಸಂಪುಟಕ್ಕೆ ಸಚಿವರ ಅಂತಿಮ ಪಟ್ಟಿಯನ್ನು ತಯಾರಿಸಿವೆ. ಇದರಲ್ಲಿ...
ತಿರುವನಂತಪುರಂ: ಎಲ್‌ಡಿಎಫ್‌ನ ಪ್ರಧಾನ ಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ, ಕೇರಳದ ನೂತನ ಸಚಿವ ಸಂಪುಟಕ್ಕೆ ಸಚಿವರ ಅಂತಿಮ ಪಟ್ಟಿಯನ್ನು ತಯಾರಿಸಿವೆ. ಇದರಲ್ಲಿ 8 ಮಂದಿ ಹೊಸಬರಿಗೆ ಮಣೆ ಹಾಕಲಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ 19 ಸಚಿವರಿದ್ದು, ಸಿಪಿಐ (ಎಂ) ನಿಂದ 12, ಮುಖ್ಯಮಂತ್ರಿ ಸೇರಿದಂತೆ ಸಿಪಿಐ ಇಂದ 4 ಮತ್ತು ಜನತಾದಳ (ಎಸ್), ಎನ್‌ಸಿಪಿ, ಕಾಂಗ್ರೆಸ್ (ಎಸ್) ನಿಂದ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.
ಇಬ್ಬರು ಸಚಿವೆಯರು ಸೇರಿದಂತೆ 8 ಮಂದಿ ಹೊಸಬರು ಇಲ್ಲಿದ್ದಾರೆ. ಡಾ. ಥಾಮಸ್ ಐಸಾಕ್, ಎಕೆ ಬಾಲನ್, ಜಿ ಸುಧಾಕರನ್ ಮೊದಲಾದವರಿಗೆ ಸಚಿವ ಸ್ಥಾನ ನೀಡಿದ್ದು ಪಿ ಶ್ರೀರಾಮಕೃಷ್ಣನ್ ಹೊಸ ಸ್ಪೀಕರ್ ಆಗಲಿದ್ದಾರೆ.
ಇಪಿ ಜಯರಾಜನ್, ಕೆಕೆ ಶೈಲಜಾ, ಟಿಪಿ ರಾಮಕೃಷ್ಣನ್ , ಕಡಕಂಪಳ್ಳಿ ಸುರೇಂದ್ರನ್, ಎಸಿ ಮೊಯ್ದೀನ್, ಜೆ ಮೆರ್ಸಿ ಕುಟ್ಟಿ ಅಮ್ಮ, ಪ್ರೊ. ಸಿ ರವೀಂದ್ರನಾಥ್, ಡಾ. ಕೆಟಿ ಜಲೀಲ್ ಸಚಿವ ಸಂಪುಟದಲ್ಲಿರುವ ಹೊಸಬರು ಆಗಿದ್ದಾರೆ.
ಸಿಪಿಐ ಪಕ್ಷದಿಂದಿರುವ ಸಚಿವರೆಲ್ಲರೂ ಹೊಸಬರೇ ಆಗಿದ್ದಾರೆ. ಪಿ.ಶಶಿ ಡೆಪ್ಯುಟಿ ಸ್ಪೀಕರ್ ಆಗಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ