ರೈತರ ಸಾಲ ಮನ್ನ, 500 ಮದ್ಯದ ಅಂಗಡಿಗಳನ್ನು ಮುಚ್ಚುವುದಕ್ಕೆ ಜಯಲಲಿತಾ ಆದೇಶ

ಎರಡನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಯಲಲಿತಾ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ

ಚೆನ್ನೈ: ಎರಡನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಯಲಲಿತಾ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ರೈತರ ಸಾಲ ಮನ್ನ, ಸರ್ಕಾರಿ ಸ್ವಾಮ್ಯದ ತಮಿಳುನಾಡು ಮಾರ್ಕೆಟಿಂಗ್ ಕಾರ್ಪೊರೇಷನ್ ನ ಕಾರ್ಯನಿರ್ವಣೆ ಅವಧಿಯನ್ನು ಕಡಿಮೆಗೊಳಿಸುವುದು ಹಾಗೂ 500 ಮದ್ಯದ ಅಂಗಡಿಗಳನ್ನು ಕೂಡಲೇ ಮುಚ್ಚಿಸುವುದು ಜಯಲಲಿತಾ ನೀಡಿರುವ ಪ್ರಮುಖ ಆದೇಶಗಳಾಗಿವೆ.
ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಸೇಂಟ್ ಜಾರ್ಜ್ ಫೋರ್ಟ್ ನಲ್ಲಿರುವ ಆಡಳಿತ ಕಛೇರಿಗೆ ಭೇಟಿ ನೀಡಿದ ತಮಿಳುನಾಡು ಸಿಎಂ ಜಯಲಲಿತಾ, ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಈಡೇರಿಸುವ 5 ಕಡತಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ರೈತರ ಸಾಲ ಮನ್ನ ಮಾಡುವ ಕಡತ, ಮಹಿಳಾ ಫಲಾನುಭವಿಗಳಿಗೆ (ಮಂಗಳಾ ಸೂತ್ರಕ್ಕಾಗಿ) ಚಿನ್ನ ಹಂಚಿಕೆ, 500 ಮದ್ಯದ ಅಂಗಡಿಗಳನ್ನು ಕೂಡಲೇ ಮುಚ್ಚಿಸಲು ಆದೇಶ ನೀಡಿರುವ ಕಡತಗಳು ಪ್ರಮುಖವಾಗಿವೆ. 
ರೈತರ ಸಾಲ ಮನ್ನಾ ಮಾಡಿರುವುದರಿಂದ ಜಯಲಲಿತಾ ಸರ್ಕಾರಕ್ಕೆ 5 ,780 ಕೋಟಿ ರೂ ಹೆಚ್ಚುವರಿ ಹೊರೆ ಬೀಳಲಿದೆ. ಇನ್ನು ಗೃಹ ಬಳಕೆಗಾಗಿ 100 ಯುನಿಟ್ ಗಳಷ್ಟು ವಿದ್ಯುತ್ ನ್ನೂ ಸಹ ಜಯಲಲಿತಾ ಉಚಿತವಾಗಿ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com