10 ವರ್ಷ ಹಳೆಯ ಡೀಸೆಲ್ ವಾಹನಕ್ಕೆ ಕೇರಳದಲ್ಲಿ ನಿಷೇಧ

10 ವರ್ಷ ಹಳೆಯದಾಗಿರುವ ಡೀಸೆಲ್ ಇಂಜಿನ್ ವಾಹನಗಳನ್ನು ಕೇರಳದಲ್ಲಿ ಬಳಕೆ ಮಾಡುವುದು ಮತ್ತು ನೋಂದಣಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಎರ್ನಾಕುಳಂ: 10 ವರ್ಷ ಹಳೆಯದಾಗಿರುವ ಡೀಸೆಲ್ ಇಂಜಿನ್ ವಾಹನಗಳನ್ನು ಕೇರಳದಲ್ಲಿ ಬಳಕೆ ಮಾಡುವುದು ಮತ್ತು ನೋಂದಣಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ ಟಿ) ನಿಷೇಧಿಸಿದೆ. ಪ್ರಸ್ತುತ ನ್ಯಾಯಮಂಡಳಿಯ ಎರ್ನಾಕುಳಂ ಸ್ಪೆಷಲ್ ಸರ್ಕ್ಯೂಟ್ ಪೀಠದ ಉದ್ಘಾಟನಾ ದಿನವೇ ಈ ತೀರ್ಮಾನವನ್ನು ಘೋಷಿಸಿದೆ.
ಒಂದು ತಿಂಗಳಿನೊಳಗೆ ಈ ತೀರ್ಮಾನವನ್ನು ಜಾರಿಗೆ ತರಲು ನ್ಯಾಯಮಂಡಳಿ ಸರ್ಕಾರಕ್ಕೆ ಒತ್ತಾಯಿಸಿದೆ.
ವಕೀಲರ ಸಂಘಟನೆಯಾದ ಲಾಯರ್ಸ್ ಎನ್ವಿರಾನ್ಮೆಂಟ್ ಅವೇರ್ನೆಸ್ ಫೋರಂ (ಲೀಫ್) ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿ ನ್ಯಾಯಮೂರ್ತಿ ಸ್ವತೇಂತ್ರ ಕುಮಾರ್ ನೇತೃತ್ವದ ಪೀಠ ಈ ತೀರ್ಮಾನ ಪ್ರಕಟಿಸಿದೆ. ಕೆಎಸ್ಆರ್ಟಿಸಿಗೂ ಈ ತೀರ್ಮಾನ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.
ಅದೇ ವೇಳೆ 30 ದಿನಗಳ ನಂತರ ಹಳೇ ವಾಹನಗಳನ್ನು ರಸ್ತೆಗಿಳಿಸಿದರೆ ರು. 10,000 ದಂಡ ವಿಧಿಸಬೇಕೆಂದು ನ್ಯಾಯಮಂಡಳಿ ಒತ್ತಾಯಿಸಿದೆ.
ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿ ದೆಹಲಿಯಲ್ಲಿ ಇಂಥಾ ಕಾರುಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತ್ತು. ಇದೇ ಕಾರಣದಿಂದಲೇ ಕೇರಳದಲ್ಲಿಯೂ ಹಳೆ ವಾಹನ ನಿಷೇಧಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಒತ್ತಾಯಿಸಿತ್ತು. 
ಟಾಟಾ ಮೊಟಾರ್ಸ್, ಮಹೀಂದ್ರ, ಟೊಯೋಟೋ, ಮೆರ್ಸಿಡಸ್ ಬೆನ್ಜ್ ಮೊದಲಾದ ವಾಹನ  ನಿರ್ಮಾಣ ಕಂಪನಿಗಳಿಗೆ ನ್ಯಾಯಮಂಡಳಿಯ ನಿರ್ಧಾರ ಹೊಡೆತ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com