ಪ್ರಧಾನಿ ರ್ಯಾಲಿಗಾಗಿ ಕಬ್ಬು ಬೆಳೆಯನ್ನೇ ತೆರವುಗೊಳಿಸಿ ಭೂಮಿ ನೀಡಿದ ರೈತ!

ಉತ್ತರ ಪ್ರದೇಶದ ಸಹರಣ್ ಪುರದಲ್ಲಿ ಮೇ.26 ಕ್ಕೆ ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗಾಗಿ ರೈತನೊಬ್ಬ ಬೆಳೆದು ನಿಂತ ಕಬ್ಬು ಬೆಳೆಯನ್ನು ಕತ್ತರಿಸಿ, ಕೃಷಿ ಭೂಮಿಯನ್ನು ರ್ಯಾಲಿಗೆ ಬಿಟ್ಟುಕೊಟ್ಟಿದ್ದಾನೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಸಹರಣ್ ಪುರ: ಉತ್ತರ ಪ್ರದೇಶದ ಸಹರಣ್ ಪುರದಲ್ಲಿ ಮೇ.26 ಕ್ಕೆ ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗಾಗಿ ರೈತನೊಬ್ಬ ಬೆಳೆದು ನಿಂತ ಕಬ್ಬು ಬೆಳೆಯನ್ನು ಕತ್ತರಿಸಿ, ಕೃಷಿ ಭೂಮಿಯನ್ನು ರ್ಯಾಲಿಗೆ ಬಿಟ್ಟುಕೊಟ್ಟಿದ್ದಾನೆ. 
ರಯೀಸ್ ಅಹ್ಮದ್ ಅವರ ಕೃಷಿ ಭೂಮಿ ರ್ಯಾಲಿ ನಡೆಯಬೇಕಿರುವ ಪ್ರದೇಶದಲ್ಲೇ ಇದ್ದು, ಸ್ವಇಚ್ಛೆಯಿಂದ ಕಬ್ಬು ಬೆಳೆಯನ್ನುತೆರವುಗೊಳಿಸಿ ರ್ಯಾಲಿಗಾಗಿ ನೀಡಿದ್ದಾರೆ, ಬೆಳೆದು ನಿಂತ ಕಬ್ಬನ್ನು ತೆರವುಗೊಳಿಸಿರುವುದಕ್ಕೆ ಆತ ಪರಿಹಾರ ಧನವನ್ನೂ ತೆಗೆದುಕೊಂಡಿಲ್ಲ ಎಂದು ಸಹರಣ್ ಪುರ ಸಂಸದ ರಾಘವ್ ಲಖನ್ ಪಾಲ್ ಶರ್ಮ ತಿಳಿಸಿದ್ದಾರೆ.
ಕಬ್ಬು ಬೆಳೆ ಬೆಳೆದಿದ್ದ ಪ್ರದೇಶದಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಂಸದ ರಾಘವ್ ಲಖನ್ ಪಾಲ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com