
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದಿನಿಂದ (ಮೇ.24 ರಿಂದ) ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಚೀನಾಗೆ ಭೇಟಿ ನೀಡುತ್ತಿದ್ದಂತೆಯೇ ಅಲ್ಲಿರುವ ಪ್ರಮುಖ ಕೈಗಾರಿಕಾ ಪ್ರಾಂತ್ಯ ಗುವಾಂಗ್ಝೌ ಗೆ ಪ್ರಣಬ್ ಮುಖರ್ಜಿ ಮೊದಲ ಭೇಟಿ ನೀಡಲಿದ್ದಾರೆ.
ಗುವಾಂಗ್ಝೌ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ, ಚೀನಾದಲ್ಲಿರುವ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇದು ಮೊದಲ ದಿನದ ಕಾರ್ಯಕ್ರಮದ ವೇಳಾಪಟ್ಟಿಯಾದರೆ, ಎರಡನೇ ದಿನ ಚೀನಾದ ರಾಜಧಾನಿ ಬೀಜಿಂಗ್ ಗೆ ತೆರಳಲಿರುವ ರಾಷ್ಟ್ರಪತಿಗಳು, ಚೀನಾ ಅಧ್ಯಕ್ಷ ಕ್ಸಿ ಝಿನ್ ಪಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದು ಭಾರತ- ಚೀನಾ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಕೇಂದ್ರ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾಗೂ ಐಐಟಿಗಳ ನಿರ್ದೇಶಕರು ಚೀನಾಗೆ ತೆರಳಿದ್ದು ಚೀನಾದ ಸಂಶೋಧನೆ ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ.
Advertisement