ವಸ್ತುಗಳು ಬಿಕರಿಯಾದಂತೆ ಗಲ್ಫ್ ರಾಷ್ಟ್ರಗಳಲ್ಲಿ ಆಂಧ್ರದ ಹೆಣ್ಣು ಮಕ್ಕಳ ಮಾರಾಟ!

ಗಲ್ಫ್ ರಾಷ್ಟ್ರಗಳಲ್ಲಿರುವ ಆಂಧ್ರ ಪ್ರದೇಶದ ಹೆಣ್ಣುಮಕ್ಕಳನ್ನು ವಸ್ತುಗಳನ್ನು ಮಾರಾಟ ಮಾಡಿದಂತೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಂಧ್ರ ಪ್ರದೇಶದ ಅನಿವಾಸಿ ಭಾರತೀಯರ ಕಲ್ಯಾಣ ಇಲಾಖೆ ಸಚಿವ ಪಲ್ಲೆ ರಘುನಾಥ ರೆಡ್ಡಿ ಹೇಳಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ನಿವಾಸಿಗಳು (ಸಂಗ್ರಹ ಚಿತ್ರ)
ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ನಿವಾಸಿಗಳು (ಸಂಗ್ರಹ ಚಿತ್ರ)
Updated on

ಅಮರಾವತಿ: ಗಲ್ಫ್ ರಾಷ್ಟ್ರಗಳಲ್ಲಿರುವ ಆಂಧ್ರ ಪ್ರದೇಶದ ಹೆಣ್ಣುಮಕ್ಕಳನ್ನು ವಸ್ತುಗಳನ್ನು ಮಾರಾಟ ಮಾಡಿದಂತೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಂಧ್ರ  ಪ್ರದೇಶದ ಅನಿವಾಸಿ ಭಾರತೀಯರ ಕಲ್ಯಾಣ ಇಲಾಖೆ ಸಚಿವ ಪಲ್ಲೆ ರಘುನಾಥ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರವೊಂದನ್ನು ಬರೆದಿರುವ ರಘುನಾಥ ರೆಡ್ಡಿ ಅವರು, ಗಲ್ಫ್ ರಾಷ್ಟ್ರಗಳಲ್ಲಿರುವ ಆಂಧ್ರ ಪ್ರದೇಶದ ನೌಕರರನ್ನು ತುಚ್ಛವಾಗಿ  ನಡೆಸಿಕೊಳ್ಳಲಾಗುತ್ತಿದೆ. ವೀಸಾ ಅವಧಿ ಮೀರಿದ ಹೆಣ್ಣುಮಕ್ಕಳನ್ನು ವಸ್ತುಗಳನ್ನು ಮಾರಾಟ ಮಾಡಿದಂತೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

"ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಗಳಲ್ಲಿರುವ ಆಂಧ್ರ ಪ್ರದೇಶದ ಹೆಣ್ಣುಮಕ್ಕಳ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಅವರನ್ನು ಸುರಕ್ಷಿತವಾಗಿ ಅವರ ತವರಿಗೆ ಮರಳಿಸುವ ತುರ್ತು  ಕಾರ್ಯವಾಗಬೇಕಿದೆ. ಅವರ ಭದ್ರತಾ ದೃಷ್ಟಯಿಂದ ಗಲ್ಫ್ ರಾಷ್ಟ್ರಗಳಿಂದ ಅವರು ಭಾರತಕ್ಕೆ ವಾಪಸಾಗಲು ಉಚಿತ ಪ್ರಯಾಣ ಮತ್ತು ವೀಸಾ ದಾಖಲೆ ನೀಡಬೇಕಿದೆ. ಈ ಬಗ್ಗೆ ಗಲ್ಫ್ ರಾಷ್ಟ್ರಗಳಲ್ಲಿ  ಭಾರತೀಯ ರಾಯಭಾರ ಕಚೇರಿಗೆ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ, ಗಲ್ಫ್ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿರುವ ಭಾರತೀಯ ನಿವಾಸಿಗಳಿಗೆ ಅಗತ್ಯ ವಸ್ತುಗಳಾದ ಊಟ, ವಸತಿ ಮತ್ತು ಬಟ್ಟೆ  ನೀಡುವಂತೆ ಕೇಂದ್ರ ವಿದೇಶಾಂಗ ಇಲಾಖೆ ಸೂಚನೆ ನೀಡಬೇಕು ಎಂದು ಅವರು ಕೇಳಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ ಗಲ್ಫ್ ರಾಷ್ಟ್ರಗಳಾದ ಬಹರೇನ್, ಕುವೈತ್, ಖತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಒಮನ್ ನಲ್ಲಿ ಸುಮಾರು 6 ಮಿಲಿಯನ್ ಭಾರತೀಯರು  ನಿರಾಶ್ರಿತರಾಗಿದ್ದು, ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಗಳಿಗೆ ಹಾರಿದ್ದ ಭಾರತೀಯರು ಅಲ್ಲಿ ನಿಜಕ್ಕೂ ಅಕ್ಷರಶಃ ಜೈಲು ನಿವಾಸಿಗಳಾಗಿದ್ದಾರೆ. ವೀಸಾ ಅವಧಿ ಮೀರಿರುವ ಭಾರತೀಯರನ್ನು ಅಲ್ಲಿ  ತುಚ್ಛವಾಗಿ ಕಾಣಲಾಗುತ್ತಿದ್ದು, ಪ್ರಮುಖವಾಗಿ ಮಹಿಳೆಯರನ್ನು ಮತ್ತು ಯುವತಿಯರನ್ನು ಮಾರಾಟದ ವಸ್ತುವಿನಂತೆ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿತ್ತು.

ಈ ಬಗ್ಗೆ ವಿದೇಶಗಳಲ್ಲಿರುವ ಕೆಲ ಭಾರತೀಯ ಸಾಮಾಜಿಕ ಸಂಘಟನೆಗಳೂ ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com