ಬಾಯ್ಲರ್ ಸ್ಫೋಟ: ಸಾವಿನ ಸಂಖ್ಯೆ 12ಕ್ಕೆ ಏರಿಕೆ, ತನಿಖೆ ಆದೇಶಿದ ಫಡ್ನವೀಸ್

ಮುಂಬೈ ಬಳಿಯಿರುವ ಡೊಂಬಿವಲಿ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ...
ಡೊಂಬಿವಲಿ ಪ್ರದೇಶದಲ್ಲಿ ಸಂಪೂರ್ಣವಾಗಿ ಭಸ್ಮವಾದ ರಾಸಾಯನಿಕ ಕಾರ್ಖಾನೆ
ಡೊಂಬಿವಲಿ ಪ್ರದೇಶದಲ್ಲಿ ಸಂಪೂರ್ಣವಾಗಿ ಭಸ್ಮವಾದ ರಾಸಾಯನಿಕ ಕಾರ್ಖಾನೆ
ಥಾಣೆ: ಮುಂಬೈ ಬಳಿಯಿರುವ ಡೊಂಬಿವಲಿ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 
ಗುರುವಾರ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಬಾಯ್ಲರ್ ಸ್ಫೋಟಗೊಂಡಿತ್ತು. ಈವರೆಗೆ 12 ಮಂದಿ ಮೃತಪಟ್ಟಿದ್ದು, ಸುಮಾರು 129ಕ್ಕೂ ಹೆಚ್ಚು ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಸ್ಫೋಟಗೊಂಡ ಸ್ಥಳದಿಂದ ಮೃತದೇಹಗಳು ಪತ್ತೆಯಾಗುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಫ್ಯಾಕ್ಟರಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 304-A ಅಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ತನಿಖೆಗೆ ಆದೇಶಿಸಿದ್ದಾರೆ. ಕೈಗಾರಿಕಾ ಸಚಿವ ಸುಭಾಶ್ ದೇಸಾಯಿ ಅವರು ಒಂದು ವಾರ ಎಲ್ಲಾ ರಾಸಾಯನಿಕ ಫ್ಯಾಕ್ಟರಿಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದಾರೆ. 
ಸ್ಫೋಟದಿಂದ ಪೂರ್ತಿ ಕಾರ್ಖಾನೆಗೆ ಬೆಂಕಿ ಹಬ್ಬಿದ ಕಾರಣ ಸಮೀಪದ ಇತರ ಎರಡು ಘಟಕಗಳಾದ ಆಚಾರ್ಯ ಕೆಮಿಕಲ್ ಫ್ಯಾಕ್ಟರಿ ಮತ್ತು ಹರ್ಬರ್ಟ್ ಬ್ರೌನ್ ಫಾರ್ಮ ಆ್ಯಂಡ್ ರಿಸರ್ಚ್ ಬೆಂಕಿಗಾಹುತಿಯಾಗಿವೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯಿಂದ ಸುಮಾರು 2 ಕಿ.ಮೀ ದೂರದವರೆಗಿನ ಸ್ಥಳೀಯ ನಿವಾಸಿಗರ ಮನೆಗಳು ಮತ್ತು ಮಳಿಗೆಗಳ ಬಾಗಿಲು ಮತ್ತು ಕಿಟಕಿ ಗಾಜುಗಳು, ರಸ್ತೆಯಲ್ಲಿ ನಿಂತಿದ್ದ ವಾಹನಗಳಿಗೆ ಹಾನಿ ಉಂಟು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com