
ಬೀಜಿಂಗ್: ಭಾರತ- ಇರಾನ್ ನಡುವೆ ನಡೆದಿದ್ದ ಚಬಹಾರ್ ಬಂದರು ಒಪ್ಪಂದ ತನ್ನ ದೇಶಕ್ಕೂ ಸಹಕಾರಿಯಾಗಲಿದೆ ಎಂದು ಚೀನಾ ಹೇಳಿದೆ.
ಪಾಕ್ನ ಗ್ವಾದಾರ್ ಬಂದರನ್ನು ಚೀನಾ ಅಭಿವೃದ್ಧಿಪಡಿಸುತ್ತಿರುವುದಕ್ಕೆ ಪರ್ಯಾಯವಾಗಿ ಭಾರತ ಇರಾನ್ ನೊಂದಿಗೆ ಚಬಹಾರ್ ಬಂದರು ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಈ ಒಪ್ಪಂದ ತನಗೂ ಸಹಕಾರಿಯಾಗಲಿದೆ ಎಂದು ಹೇಳುವ ಮೂಲಕ ಚೀನಾ ಅಚ್ಚರಿ ಮೂಡಿಸಿದೆ.
ಭಾರತದ ಸಮುದ್ರ ಮಾರ್ಗದ ಮೂಲಕ ಮಧ್ಯಪ್ರಾಚ್ಯವನ್ನು ಸಂರ್ಪಸುವುದಕ್ಕೆ ಚಬಹಾರ್ ಬಂದರು ಒಪ್ಪಂದ ಸಹಕಾರಿಯಾಗಲಿದ್ದು, ಇದರಿಂದ ಬಹುರಾಷ್ಟ್ರೀಯ ಉದ್ದಿಮೆಗಳ ವಿಷಯದಲ್ಲಿ ಚೀನಾಗೂ ಉಪಯೋಗವಾಗಲಿದೆ ಎಂದು ಚೀನಾ ಹೇಳಿಕೊಂಡಿದೆ. ಭಾರತ ನಿರ್ಮಿಸಬೇಕಿದ್ದ ಚಬಹಾರ್ ಬಂದರನ್ನು ನಿರ್ಮಿಸಲು ಈ ಹಿಂದೆ ಚೀನಾ ಉತ್ಸುಕತೆ ತೋರಿತ್ತು. ಆದರೆ ಅಂತಿಮವಾಗಿ ಚಬಹಾರ್ ಬಂದರು ನಿರ್ಮಾಣ ಒಪ್ಪಂದ ಭಾರತದ ಪಾಲಾಗಿದೆ. ಇದರಿಂದ ಚೀನಾಗೆ ಹೊಡೆತ ನೀಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರೂ ಚೀನಾ ಮಾತ್ರ ಭಾರತ- ಇರಾನ್ ನಡುವಿನ ಚಬಹಾರ್ ಒಪ್ಪಂದದಿಂದ ತನಗೂ ಉಪಯೋಗವಾಗಲಿದೆ ಎಂದು ಹೇಳಿದೆ.
Advertisement