ಗೆದ್ದಲಿನಂತ ಭ್ರಷ್ಟಾಚಾರವನ್ನು ಹತೋಟಿಗೆ ತಂದಿದ್ದೇವೆ: ಪ್ರಧಾನಿ ಮೋದಿ

ಗೆದ್ದಲಿನಂತೆ ದೇಶವನ್ನು ತಿನ್ನುತ್ತಿದ್ದ ಭ್ರಷ್ಟಾಚಾರವನ್ನು ನಮ್ಮ ಸರ್ಕಾರ ಹತೋಟಿಗೆ ತಂದಿದೆ. ಸರ್ಕಾರದದ ಕ್ರಮಗಳಿಂದಾಗಿ 36 ಸಾವಿರ ಕೋಟಿ ರು. ಅಕ್ರಮ ಸ್ಥಗಿತಗೊಂಡಿದೆ ಪ್ರಧಾನಿ ಮೋದಿ ಹೇಳಿದರು...
ಸಾಧನಾ ಸಮಾವೇಶದಲ್ಲಿ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಸಾಧನಾ ಸಮಾವೇಶದಲ್ಲಿ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಗೆದ್ದಲಿನಂತೆ ದೇಶವನ್ನು ತಿನ್ನುತ್ತಿದ್ದ ಭ್ರಷ್ಟಾಚಾರವನ್ನು ನಮ್ಮ ಸರ್ಕಾರ ಹತೋಟಿಗೆ ತಂದಿದೆ. ಸರ್ಕಾರದದ ಕ್ರಮಗಳಿಂದಾಗಿ 36 ಸಾವಿರ ಕೋಟಿ ರು. ಅಕ್ರಮ ಸ್ಥಗಿತಗೊಂಡಿದೆ  ಪ್ರಧಾನಿ ಮೋದಿ ಹೇಳಿದರು.

ನವದೆಹಲಿಯಲ್ಲಿ ಶನಿವಾರ ಆರಂಭವಾದ ಎನ್ ಡಿಎ ಸರ್ಕಾರದ ಸಾಧನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇ೦ದ್ರ ಮೋದಿ, ಭ್ರಷ್ಟಾಚಾರವು ದೇಶವನ್ನು ಗೆದ್ದಲಿನಂತೆ  ತಿನ್ನುತ್ತಿತ್ತು. ಎನ್‌ಡಿಎ ಸರ್ಕಾರ ಕೈಗೊಂಡಿರುವ ಕ್ರಮದಿಂದ 36 ಸಾವಿರ ಕೋಟಿ ರೂ. ಅಕ್ರಮ ಸ್ಥಗಿತಗೊಂಡಿದೆ. ಜನರ ಮುಂದೆ ಎರಡು ಆಯ್ಕೆಗಳಿವೆ. ಒಂದು ಅಭಿವೃದ್ಧಿ ಅಜೆಂಡಾ ಮತ್ತೊಂದು  ಪ್ರಗತಿಗೆ ವಿರೋಧವಾದ ಅಜೆಂಡಾ. ಇವೆರಡರ ನಡುವಿನ ವ್ಯತ್ಯಾಸ ಗುರುತಿಸಿ ಒಳ್ಳೆಯದನ್ನೇ ಆಯ್ದುಕೊಳ್ಳುವ ಸಾಮರ್ಥ್ಯ ಜನರಿಗಿದೆ. ಸರ್ಕಾರ ಸಾರ್ವಜನಿಕರಿಗೆ  ಉತ್ತರದಾಯಿಯಾಗಿರುವುದು ಬಹಳ ಮುಖ್ಯ. ಸರ್ಕಾರದ ಮೇಲೆ ಜನರ ನಂಬಿಕೆ ಹೆಚ್ಚಾಗುತ್ತಿದೆ. ಜನರು ನಮ್ಮಲ್ಲಿ ನಂಬಿಕೆ ಇಟ್ಟಿದ್ದಾರೆ. ದೇಶದ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಯತ್ನ  ಮಾಡಲಾಗುವುದು. ‘ಟೀಂ ಇಂಡಿಯಾ’  ಪರಿಕಲ್ಪನೆ ನಮ್ಮದಾಗಿದೆ. ಸರ್ಕಾರದ ಖಜಾನೆಯಲ್ಲಿರುವ ಹಣ ಬಡವರದ್ದು. ಅಭಿವೃದ್ಧಿ ಫಲ ಮೊದಲು ಬಡವರಿಗೆ ಸಿಗಬೇಕು ಪ್ರಜೆಗಳಿಗೆ ಗರಿಷ್ಠ  ಅಧಿಕಾರ ನೀಡುವುದು ಎನ್‌ಡಿಎ ಸರ್ಕಾರದ ಗುರಿ ಮಣ್ಣಿನ ಆರೋಗ್ಯ ಕಾಪಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಯಿಂದಾಗಿ ರೈತರು ಅಧಿಕ ಬೆಳೆ ತೆಗೆಯುತ್ತಿದ್ದಾರೆ ಎಂದು  ಹೇಳಿದರು.

ಇದೇ ವೇಳೆ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, "ಪ್ರಜಾಪ್ರಭುತ್ವದಲ್ಲಿ ಸಕಾ೯ರದ ಕೆಲಸಗಳನ್ನು ಪರಾಮಶೆ೯ಗೊಳಪಡಿಸುವುದು ಅತಿ ಅಗತ್ಯ. ಹಿ೦ದೆ ಆಡಳಿತದಲ್ಲಿದ್ದ  ಹಾಗೂ ಈಗಿನ ಸರ್ಕಾರದ ಕಾರ್ಯವೈಖರಿಯನ್ನು ಹೋಲಿಕೆ ಮಾಡಿ ನೋಡಬೇಕು. ಆಗ ಎನ್‍ಡಿಎ ಸಕಾ೯ರ ದೇಶದ ಅಭೀವೃದ್ಧಿಗಾಗಿ ಕೈಗೊ೦ಡಿರುವ ಕ್ರಮಗಳು ಅಥ೯ವಾಗುತ್ತವೆ ಎ೦ದು  ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಚುಚ್ಚಿದರು.

ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ರೂಪಿಸಿರುವ ಬೇಟಿ ಬಚಾವೊ ಬೇಟಿ ಪಢಾವೊ ಆಂದೋಲನದ ರಾಯಭಾರಿಯಾಗಿರುವ ನಟ ಅಮಿತಾಬ್‌ ಬಚ್ಚನ್‌, ‘ದೇಶದ ಜನಸಂಖ್ಯೆಯ ಅರ್ಧದಷ್ಟಿರುವ  ಸ್ತ್ರೀಯರನ್ನು ಕಡೆಗಣಿಸುವಂತಿಲ್ಲ. ‘ನಮ್ಮನ್ನು ಕಡೆಗಣಿಸಲಾಗುತ್ತಿದೆ, ನಾವು ಅಸಹಾಯಕರು’ ಎಂಬ ಭಾವನೆ ಅವರಲ್ಲಿ ಮೂಡಬಾರದು. ಎಲ್ಲ ವಿಚಾರಗಳಲ್ಲೂ ಅವರು ಸಮಾನ ಪಾಲುದಾರರು’  ಎಂದರು. ಎನ್‍ಡಿಎ ಸಕಾ೯ರ ಅಭೀವೃದ್ಧಿ ಕಾಯ೯ಗಳನ್ನು ಕೈಗೊಳ್ಳುತ್ತಿದ್ದು, ಈ ಹಿ೦ದೆ ದೇಶವನ್ನು ಲೂಟಿ ಮಾಡಿರುವ ಪಕ್ಷದ ನಾಯಕರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ  ಹಲವು ಸುಳ್ಳು ಆರೋಪ ಗಳನ್ನು ಮಾಡುತ್ತಿದ್ದಾರೆ ಎ೦ದು ಆರೋಪಿಸಿದ ಪ್ರಧಾನಿ ಮೋದಿ, ಭ್ರಷ್ಟಾಚಾರ ನಿಯ೦ತ್ರಣಕ್ಕೆ ಕೇ೦ದ್ರ ಸಕಾ೯ರ ಕೈಗೊ೦ಡಿರುವ ಕ್ರಮಗಳನ್ನೂ ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com