ಮುಂದಿನ 2 ವರ್ಷದಲ್ಲಿ ಗಂಗಾ ನದಿ ಅತ್ಯಂತ ಶುದ್ದವಾಗಲಿದೆ: ಉಮಾಭಾರತಿ

ಎರಡು ವರ್ಷಗಳಲ್ಲಿ ಗಂಗಾ ನದಿ ಶುದ್ದವಾಗಲಿದ್ದು ವಿಶ್ವದ ಟಾಪ್ ಟೆನ್ ಪಟ್ಟಿಗೆ ಸೇರಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ...
ಉಮಾ ಭಾರತಿ
ಉಮಾ ಭಾರತಿ
Updated on: 

ನವದೆಹಲಿ: ಎರಡು ವರ್ಷಗಳಲ್ಲಿ ಗಂಗಾ ನದಿ ಶುದ್ದವಾಗಲಿದ್ದು ವಿಶ್ವದ ಟಾಪ್ ಟೆನ್ ಪಟ್ಟಿಗೆ ಸೇರಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.

ಎನ್​ಡಿಎ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು ಕಳೆದ ಯುಪಿಎ ಸರ್ಕಾರ ಪರಿಣಾಮಕಾರಿಯಾದ ಯೋಜನೆ ರೂಪಿಸದೆ ಹಣ ವ್ಯಯ ಮಾಡಿದೆ. ಇದರಿಂದಾಗಿ ಗಂಗಾ ನದಿ ಇನ್ನಷ್ಟು ಕಲುಷಿತವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಮೋದಿ ನೇತೃತ್ವದ ಸರ್ಕಾರ ಆರಂಭದಿಂದಲೇ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದರಿಂದಾಗಿ 2018ರಲ್ಲಿ ಯೋಜನೆ ಪೂರ್ಣಗೊಳ್ಳಲ್ಲಿದ್ದು, ವಿಶ್ವದ ಅಗ್ರ ಹತ್ತು ನದಿಗಳಲ್ಲಿ ಗಂಗಾ ಸ್ಥಾನಗಿಟ್ಟಿಸಿಕಿಳ್ಳಲಿದೆ ಎಂದರು.

ಈಗಾಗಲೇ ಕಾರ್ಖಾನೆಗಳ ಕಲ್ಮಷಗಳು ನದಿಗೆ ಸೇರುವುದನ್ನು ತಡೆಯಲಾಗಿದೆ. ಇದೇ ಸಂಧರ್ಭದಲ್ಲಿ ಯಮುನಾ ನದಿಯನ್ನು ಕೂಡ ಶುದ್ಧ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ 130 ಕೈಗಾರಿಕೆಗಳನ್ನು ಪರಿವೀಕ್ಷಣೆ ನಡೆಸಿ, ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com