
ಚೆನ್ನೈ: ಶಾಲೆ ಬಸ್ ಮೇಲೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ವಿದ್ಯುದಾಘಾತಕ್ಕೀಡಾಗಿ ಸುಮಾರು 40 ಮಕ್ಕಳು ಗಾಯಗೊಂಡಿರುವ ಘಟನೆ ಚೆನ್ನೈ ನ ಥೇಣಿ ಜಿಲ್ಲೆಯ ಪೆರಿಯಾಕುಲಂ ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಗಾಯಗೊಂಡ ಎಲ್ಲಾ ವಿದ್ಯಾರ್ಥಿಗಳನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಮೇಲೆ ತಂತಿ ಬಿದ್ದಿದ್ದು ವಿದ್ಯಾರ್ಥಿಗಳ ಅರಿವಿಗೆ ಬಾರದ ಕಾರಣ ದುರಂತ ಸಂಭವಿಸಲು ಕಾರಣವಾಯಿತು. ಇನ್ನೂ ತಮಿಳುನಾಡು ಹಣಕಾಸು ಸಚಿವ ಪನ್ನೀರ್ ಸೆಲ್ವಂ ಮತ್ತು ಸ್ಥಳೀಯ ಶಾಸಕ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.
Advertisement