ಮೋದಿ ಸರ್ಕಾರಕ್ಕೆ ರಘುರಾಮ್ ಅವರಂಥ ಆರ್ಥಿಕ ತಜ್ಞರನ್ನು ಹೊಂದುವ ಅರ್ಹತೆ ಇಲ್ಲ: ಚಿದಂಬರಂ

ರಘುರಾಮ್ ರಾಜನ್ ಅವರಂಥ ಆರ್ಥಿಕ ತಜ್ಞರನ್ನು ಹೊಂದುವ ಅರ್ಹತೆ ನರೇಂದ್ರ ಮೋದಿ ಸರ್ಕಾರಕ್ಕೆ...
ಪಿ ಚಿದಂಬರಂ
ಪಿ ಚಿದಂಬರಂ
Updated on: 
ನವದೆಹಲಿ: ರಘುರಾಮ್ ರಾಜನ್ ಅವರಂಥ ಆರ್ಥಿಕ ತಜ್ಞರನ್ನು ಹೊಂದುವ ಅರ್ಹತೆ ನರೇಂದ್ರ ಮೋದಿ ಸರ್ಕಾರಕ್ಕೆ ಇಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಹೇಳಿದ್ದಾರೆ. 
ರಾಜನ್ ಅವರ ಮೂರು ವರ್ಷಗಳ ಅಧಿಕಾರವಧಿ ಸೆಪ್ಟೆಂಬರ್ ಮೊದಲ ವಾರ ಕೊನೆಗೊಳ್ಳಲಿದೆ. ರಾಜನ್ ಅವರನ್ನು 2ನೇ ಅವಧಿಗೆ ಮುಂದುವರಿಸಬೇಕೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯುಪಿಎ ಸರ್ಕಾರ ವಿಶ್ವದ ಅತ್ಯುನ್ನತ ಅರ್ಥಶಾಸ್ತ್ರಜ್ಞರಲ್ಲೊಬ್ಬರಾದ ರಾಜನ್ ಅವರನ್ನು ನೇಮಕ ಮಾಡಿದೆ. ನಮಗೆ ಅವರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸ್ಪಷ್ಟನೇ ನೀಡಿದರು. 
ಇನ್ನು ರಾಜನ್ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ನು ಅವರನ್ನು ನಾವು ನಿರ್ಲಕ್ಷಿಸುತ್ತೇವೆ. ಪ್ರಧಾನಿಗಳು ಅಥವಾ ಹಣಕಾಸು ಸಚಿವರು ರಾಜನ್ ಬಗ್ಗೆ ಮಾತನಾಡಿದರೆ ಮಾತ್ರ ಗಂಭೀರವಾಗಿ ಪರಿಗಣಿಸುತ್ತೇವೆ ಎಂದ ಅವರು, ರಾಜನ್ ಅಂತಹ ಆರ್ಥಿಕ ತಜ್ಞರನ್ನು ಹೊಂದುವ ಅರ್ಹತೆ ಮೋದಿ ಸರ್ಕಾರಕ್ಕೆ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com