ರಾಬರ್ಟ್ ವಾದ್ರಾ ಲಂಡನ್ ನಲ್ಲಿ ಬೇನಾಮಿ ಫ್ಲ್ಯಾಟ್ ಖರೀದಿಸಿದ್ದರೆ?

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ 2009ರಲ್ಲಿ ಶಸ್ತ್ರಾಸ್ತ್ರ ವ್ಯಾಪಾರಿಯೊಬ್ಬರು...
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
Updated on

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ 2009ರಲ್ಲಿ ಶಸ್ತ್ರಾಸ್ತ್ರ ವ್ಯಾಪಾರಿಯೊಬ್ಬರು ಬೇನಾಮಿ ಫ್ಲ್ಯಾಟ್ ನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಹಣಕಾಸು ಸಚಿವಾಲಯ ತನಿಖೆ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದೆ.

ಜಾರಿ ನಿರ್ದೇಶನಾಲಯ ಮತ್ತು ತೆರಿಗೆ ಅಧಿಕಾರಿಗಳು ವರದಿಯನ್ನು ಸಿದ್ದಪಡಿಸಿದ್ದು, ವಾದ್ರಾ ಮತ್ತು ಅವರ ಸಹಚರ ಮನೋಜ್ ಅರೋರ ನಡುವೆ ನಡೆದ ಇಮೇಲ್ ಸಂವಹನಕ್ಕೆ ಸಂಬಂಧಪಟ್ಟಂತೆ ತನಿಖೆಯತ್ತ ಒಲವು ತೋರಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ಸಿಕ್ಕಿದೆ.

ಭಂಡಾರಿಯವರ ಒಡೆತನಕ್ಕೆ ಸೇರಿದ ಹಲವು ಕಟ್ಟಡಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಲಂಡನ್ ನಲ್ಲಿರುವ ಮನೆಗೆ ಹಣ ನೀಡುವ ಮತ್ತು ನವೀಕರಣ ಕುರಿತಂತೆ ಹಲವು ಇಮೇಲ್ ಸಂದೇಶಗಳ ಮೂಲಕ ಚರ್ಚೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಲಂಡನ್ ನ ಬ್ರಿನ್ಸ್ಟನ್ ಸ್ಕ್ವೇರ್ ನ 12 ಎಲ್ಲೆರ್ಟಾನ್ ಹೌಸ್ ನಲ್ಲಿ 2009ರಲ್ಲಿ 19 ಕೋಟಿಗೆ ಮನೆ ಖರೀದಿಸಿದ್ದು ಅದನ್ನು 2010 ಜೂನ್ ನಲ್ಲಿ ಮಾರಾಟ ಮಾಡಲಾಗಿತ್ತು ಎಂದು ಗೊತ್ತಾಗಿದೆ.

ವಾದ್ರಾ ಮತ್ತು ಅರೋರಾ, ಲಂಡನ್ ನಲ್ಲಿ ಭಂಡಾರಿಯವರ ಸಂಬಂಧಿಕ ಸುಮಿತ್ ಚಡ್ಡಾ ಅವರಿಗೆ ಇಮೇಲ್ ಕಳುಹಿಸಿದ್ದಾರೆ. ಅದರಲ್ಲಿ ಸುಮಿತ್ ಮನೆಯ ನವೀಕರಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಖರ್ಚುವೆಚ್ಚವನ್ನು ಕಳುಹಿಸಬೇಕೆಂದು ಹೇಳಿದ್ದಾರೆ. ಅದಕ್ಕೆ ಉತ್ತರಿಸಿದ ವಾದ್ರಾ, ತಮ್ಮ ಕಾರ್ಯದರ್ಶಿ ಮನೋಜ್ ಈ ವಿಷಯ ನೋಡಿಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ಭಂಡಾರಿಯವರು ಆಫ್ ಸೆಟ್ ಇಂಡಿಯಾ ಸೊಲ್ಯೂಷನ್ಸ್ ನ ಮಾಲೀಕರಾಗಿದ್ದು, ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾಗೃತ ದಳ ಅದರ ವಿರುದ್ಧ ಅಕ್ರಮ ವ್ಯವಹಾರದ ಹಿನ್ನೆಲೆಯಲ್ಲಿ ತನಿಖೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com