ಉ.ಖಂಡದಲ್ಲಿ ಮತ್ತೆ ಮೇಘಸ್ಪೋಟ ಎಚ್ಚರಿಕೆ; 6ಕ್ಕೇರಿದ ಸಾವಿನ ಸಂಖ್ಯೆ

ಮೇಘಸ್ಫೋಟದಿಂದಾಗಿ ಉಂಟಾದ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮತ್ತೆ ಭಾರಿ ಮಳೆಯಾಗುವ ಭೀತಿ ಎದುರಾಗಿದೆ..
ಮಳೆಯಿಂದಾಗಿ ಕುಸಿತಗೊಂಡಿರುವ ರಸ್ತೆಯನ್ನು ದುರಸ್ತಿ ಮಾಡುತ್ತಿರುವ ಸೈನಿಕರು (ಸಂಗ್ರಹ ಚಿತ್ರ)
ಮಳೆಯಿಂದಾಗಿ ಕುಸಿತಗೊಂಡಿರುವ ರಸ್ತೆಯನ್ನು ದುರಸ್ತಿ ಮಾಡುತ್ತಿರುವ ಸೈನಿಕರು (ಸಂಗ್ರಹ ಚಿತ್ರ)

ಡೆಹ್ರಾಡೂನ್: ಮೇಘಸ್ಫೋಟದಿಂದಾಗಿ ಉಂಟಾದ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸುವ ಕುರಿತು ಹವಾಮಾನ ಇಲಾಖೆ  ಎಚ್ಚರಿಕೆ ನೀಡಿದ್ದು, ಮತ್ತೆ ಭಾರಿ ಮಳೆಯಾಗುವ ಭೀತಿ ಎದುರಾಗಿದೆ.

ಕಣೆವೆ ರಾಜ್ಯ ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಸೋಮವಾರ ಸ್ವಲ್ಪಮಟ್ಟಿಗೆ ತನ್ನ ಆರ್ಭಟ ನಿಲ್ಲಿಸಿದೆಯಾದರೂ ಮತ್ತೆ ಮೇಘಸ್ಫೋಟ  ಸಂಭವಿಸುವ ಹವಾಮಾನ ಇಲಾಖೆಯ ಎಚ್ಚರಿಕೆ ಚಾರ್ ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಲ್ಲಿ ಭೀತಿ ಉಂಟುಮಾಡಿದೆ. ಶನಿವಾರ ಉತ್ತರಾಖಂಡದ ಥೇರಿ, ಉತ್ತರಕಾಶಿ,  ಘನ್ಸಾಲಿಯಲ್ಲಿ ಸಾವಿರಾರು ಯಾತ್ರಿಕರು ಸಂಕಷ್ಟದಲ್ಲಿ ಸಿಲುಕಿದ್ದರು. ಭಾನುವಾರ ಸುರಿದ ಮಳೆಗೆ ಥೇರಿಯಿಂದ ಕೇದಾರನಾಥಕ್ಕೆ ಹೋಗುವ ಹೆದ್ದಾರಿಯನ್ನೂ ಬಂದ್ ಮಾಡಲಾಗಿತ್ತು.  ಸೋಮವಾರ ವರುಣನ ಆರ್ಭಟ ಕೊಂಚ ತಗಿದ್ದು, ಥೇರಿ ಮತ್ತು ಚಮೋಲಿ ಪ್ರದೇಶಗಳಿಂದ ಯಾತ್ರಿಕರು ಕೇದಾರನಾಥಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಮೊಬೈಲ್ ನೆಟವರ್ಕ್ ಸ್ಥಗಿತ
ಇನ್ನು ಭಾರಿ ಮಳೆಯಿಂದಾಗಿ ಚಾರ್ ಧಾಮ್ ಯಾತ್ರೆಯ ಕಣಿವೆಗಳಲ್ಲಿ ಭೂಕುಸಿತ ಉಂಟಾಗಿದ್ದು ಇಲ್ಲಿದ್ದ ವಿವಿಧ ಮೊಬೈಲ್ ಸೇವಾ ಸಂಸ್ಥೆಯ ನೆಟ್ ವರ್ಕ್ ಟವರ್ ಗಳು ಹಾನಿಗೀಡಾಗಿವೆ.  ಥೇರಿ,ಚಮೋಲಿಯ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದ ಕಾರಣ ಜೆಸಿಬಿ ಬಳಸಿ ರಸ್ತೆಯನ್ನು ಸಂಚಾರಯೋಗ್ಯ ಮಾಡಲಾಯಿತು, ಕೇದಾರನಾಥಕ್ಕೆ ಹೋಗುವ ರಸ್ತೆಯಲ್ಲಿ  ನಿಧಾನಗತಿಯಲ್ಲೇ ವಾಹನ ಸಂಚಾರವಿತ್ತು ಎಂದು ಚಾರ್‌ಧಾಮ ಯಾತ್ರಾರ್ಥಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com