ತಲಾಖ್
ತಲಾಖ್

ತಲಾಖ್ ಗೆ ಪರ್ಯಾಯ ವ್ಯವಸ್ಥೆ ಮಾಡಿ, ಮುಸ್ಲಿಂ ವೈಯಕ್ತಿಕ ಕಾನೂನುಗಳಿಂದ ಸರ್ಕಾರ ದೂರ ಉಳಿಯಲಿ: ಮುಸ್ಲಿಂ ಮುಖಂಡರು

ತಲಾಖ್ ಗೆ ಅಂಕುಶ ಹಾಕಲು, ಆಂತರಿಕ ಕಾರ್ಯವಿಧಾನ( ವ್ಯವಸ್ಥೆಯನ್ನು) ಜಾರಿಗೆ ತರುವ ಅಗತ್ಯವಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ

ನವದೆಹಲಿ: ತಲಾಖ್ ಗೆ ಅಂಕುಶ ಹಾಕಲು,  ಆಂತರಿಕ ಕಾರ್ಯವಿಧಾನ( ವ್ಯವಸ್ಥೆಯನ್ನು) ಜಾರಿಗೆ ತರುವ ಅಗತ್ಯವಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದು, ಸರ್ಕಾರ ಮುಸ್ಲಿಂ ವೈಯಕ್ತಿಕ ಕಾನೂನುಗಳಿಂದ ದೂರ ಉಳಿಯಬೇಕೆಂದು ಹೇಳಿದ್ದಾರೆ.

ಪತ್ನಿಗೆ ಅಕ್ರಮವಾಗಿ ತಲಾಖ್ ನೀಡುವ ವ್ಯಕ್ತಿಯನ್ನು ಬಹಿರಂಗಪಡಿಸಿ ಅವಮಾನ ಉಂಟುಮಾಡುವ ಮಾದರಿಯಲ್ಲಿ ಆಂತರಿಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ ಎಂದಿರುವ ಮುಸ್ಲಿಂ ಮುಖಂಡರು, ಸರ್ಕಾರ ತಲಾಖ್ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುವ ಮೂಲಕ ಈ  ವಿಷಯವನ್ನು ಚುನಾವಣಾ ತಂತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಸರ್ಕಾರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿರುವ ಮುಸ್ಲಿಂ ಮುಖಂಡರು, ಪತ್ನಿಗೆ ಅಕ್ರಮವಾಗಿ ತಲಾಖ್ ನೀಡುವುದನ್ನು ವಿರೋಧಿಸಿದ್ದು, ಅದನ್ನು ತಡೆಗಟ್ಟಿ ಶಿಕ್ಷೆ ವಿಧಿಸಲು ಆಂತರಿಕ ವ್ಯವಸ್ಥೆ ಅಗತ್ಯವಿದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com