
ಭೋಪಾಲ್: 8 ಮಂದಿ ಸಿಮಿ ಉಗ್ರರ ಎನ್ ಕೌಂಟರ್ ಗೆ ಸಾಕ್ಷಿಯಾದ ಭೋಪಾಲ್ ಹೊರವಲಯದ ಗ್ರಾಮ ಇದೀಗ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದ್ದು, ಉಗ್ರರು ಹತರಾದ ಜಾಗಕ್ಕೆ ಇದೀಗ ಸ್ಥಳೀಯ ಸಾವಿರಾರು ಮಂದಿ ಗ್ರಾಮಸ್ಥರು ಬಂದು ಹೋಗುತ್ತಿದ್ದಾರೆ.
ಆಘಾತಕಾರಿ ಅಂಶವೆಂದರೆ ಉಗ್ರರು ಸಾವನ್ನಪ್ಪಿದ್ದ ಈ ಸ್ಥಳದಲ್ಲಿ ಉಗ್ರರ ಸಾಯುವ ವೇಳೆ ಅವರ ಬಳಿದ್ದ ಕೆಲ ವಸ್ತುಗಳು ಇಲ್ಲೇ ಇದ್ದು, ಈ ವಸ್ತುಗಳನ್ನು ಇನ್ನೂ ಪೊಲೀಸರು ವಶಪಡಿಸಿಕೊಂಡಿಲ್ಲ. ಹೀಗಾಗಿ ಈ ವಸ್ತುಗಳೊಂದಿಗೆಯೇ ಸ್ಥಳೀಯ ಯುವಕರ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಅತ್ತ ಪ್ರತಿಪಕ್ಷಗಳು ಎನ್ ಕೌಂಟರ್ ನಕಲಿ ಎಂದು ವಾದ ಮಾಡುತ್ತಿದ್ದು, ಒಂದು ವೇಳೆ ಪ್ರತಿಪಕ್ಷಗಳ ಒತ್ತಡಕ್ಕೆ ಸರ್ಕಾರ ಮಣಿದು ಪ್ರಕರಣವನ್ನು ತನಿಖೆಗೆ ಒಪ್ಪಿಸಿದರೆ ಆಗ ಈ ವಸ್ತುಗಳೆಲ್ಲಾ ತನಿಖೆ ಅನಿವಾರ್ಯವಾಗುತ್ತದೆ.
ಈ ವಿಚಾರ ತಿಳಿದಿದ್ದರೂ ಸ್ಥಳೀಯ ಪೊಲೀಸರು ಮಾತ್ರ ಘಟನಾ ಪ್ರದೇಶಕ್ಕೆ ಯಾವುದೇ ರೀತಿಯ ಭದ್ರತೆಯನ್ನು ಒದಗಿಸಿಲ್ಲ. ಕನಿಷ್ಟ ಓರ್ವ ಪೇದೆಯನ್ನು ಕೂಡ ವೀಕ್ಷಣೆಗೆ ನೇಮಿಸಿಲ್ಲ ಎಂದು ಹೇಳಲಾಗುತ್ತಿದೆ.
ಎನ್ ಕೌಂಟರ್ ನಡೆದ ಈಟ್ ಖೇಡಿ ಗ್ರಾಮದ ಸುತಮುತ್ತ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿದ್ದು, ಈ ಹಳ್ಳಿಗಳಿಂದ ನಿತ್ಯ ಸುಮಾರು ಸಾವಿರಾರು ಯುವಕರು ಇಲ್ಲಿಗೆ ಆಗಮಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಈಟ್ ಖೇಡಿ ಗ್ರಾಮ ಹಾಗೂ ಎನ್ ಕೌಂಟರ್ ಪ್ರದೇಶ ಪ್ರವಾಸಿ ತಾಣವಾಗಿ ಬದಲಾಗಿದೆ.
Advertisement