

ಜಾಮ್ ನಗರ್: ಗುಜರಾತ್‍ನ ಜಾಮ್ ನಗರದಲ್ಲಿ ಯುವಕನೊರ್ವನನ್ನು ದುಷ್ಕರ್ಮಿಗಳು ಹಾಡುಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಅಕ್ರಮ ಸಂಬಂಧ ಆರೋಪದಡಿ ತಂದೆ ಮಗ ಇಬ್ಬರು ಸೇರಿ ನಿನ್ನೆ ಸಂಜೆ ನಡುರಸ್ತೆಯಲ್ಲಿ ಯುವಕನನ್ನು ಅಡಗಟ್ಟಿ ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ. ಇರಿತಗೊಳಗಾದ ಯುವಕ ಸತತ ಎರಡು ಗಂಟೆಗಳ ಕಾಲ ರಕ್ತದ ಮಡುವಿನಲ್ಲಿ ಬಿದ್ದಿದ್ದು ಆತನ ರಕ್ಷಣೆಗೆ ಯಾರು ಬಾರದೆ ಇರುವುದು ದುರದೃಷ್ಟಕರ.
ಯುವಕನನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿಯುತ್ತಿರುವಾಗ ರಸ್ತೆಯಲ್ಲೇ ಕೆಲವರು ಓಡಾಡುತ್ತಿದ್ದರು. ಆತನ ಸಹಾಯಕ್ಕೆ ಬರಲಿಲ್ಲ. ಹೀಗಾಗಿ ರಕ್ತ ಸ್ರಾವದಿಂದ ಯುವಕ ಸಾವನ್ನಪ್ಪಿದ್ದಾನೆ.