ಅಮಿತ್ ಶಾ
ಅಮಿತ್ ಶಾ

ಉ.ಪ್ರದೇಶ ಚುನಾವಣೆ: ಬಿಜೆಪಿಯ 'ಪರಿವರ್ತನ್ ಯಾತ್ರೆ'ಗೆ ಅಮಿತ್ ಶಾ ಚಾಲನೆ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಪಕ್ಷದ 'ಪರಿವರ್ತನ್ ಯಾತ್ರೆ'ಗೆ ಚಾಲನೆ ನೀಡಿದ್ದು, ಇದರೊಂದಿಗೆ ಬಿಜೆಪಿ...
Published on
ಶಹರನಾಪುರ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಪಕ್ಷದ 'ಪರಿವರ್ತನ್ ಯಾತ್ರೆ'ಗೆ ಚಾಲನೆ ನೀಡಿದ್ದು, ಇದರೊಂದಿಗೆ ಬಿಜೆಪಿ 2017ರ ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದೆ.
ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಯಾದವ್ ಕುಟುಂಬದ ವಿರುದ್ಧ ಹಾಗೂ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ಆಡಳಿತರೂಢ ಸಮಾಜವಾದಿ ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಬದಲು ಚಿಕ್ಕಪ್ಪ(ಶಿವಪಾಲ್ ಯಾದವ್) ಮತ್ತು ಮಗ(ಅಖಿಲೇಶ್ ಯಾದವ್) ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ಎಸ್ ಮತ್ತು ಬಿಎಸ್ಪಿ ಎರಡೂ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿವೆ. ಬಿಜೆಪಿಯಿಂದ ಮಾತ್ರ ಉತ್ತರ ಪ್ರದೇಶವನ್ನು ಗೂಂಡಾಗಿರಿ ಮುಕ್ತಿಗೊಳಿಸಲು ಸಾಧ್ಯ ಎಂದು ಶಾ ಹೇಳಿದ್ದಾರೆ. ಅಲ್ಲದೆ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com