ಛತ್ತಿಸ್ ಗಢದ 16ನೇ ರಾಜ್ಯೋಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಪಾಕಿಸ್ತಾನ ಭಯೋತ್ಪಾದನೆಯ ಹೇಡಿ ಕೃತ್ಯದ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಆದರೆ ನಮ್ಮ ಸರ್ಕಾರ ಭಾರತ ಯಾರ ಎದುರೂ ತಲೆ ತಗ್ಗಿಸಲು ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ನೆರೆಯ ರಾಷ್ಟ್ರವೊಂದು ನಮ್ಮ ರಾಷ್ಟ್ರಕ್ಕೆ ಹಾನಿ ಉಂಟುಮಾಡಬೇಕೆಂದು ನಿರಂತರವಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ, ಆದರೆ ಭಯೋತ್ಪಾದನೆ ಧೀರರ ಅಸ್ತ್ರವಲ್ಲ, ಬದಲಾಗಿ ಹೇಡಿಗಳ ಅಸ್ತ್ರ ಎಂಬುದನ್ನು ಅರಿಯಲು ವಿಫಲವಾಗುತ್ತಿದೆ ಎಂದು ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.