
ನವದೆಹಲಿ: ಅತ್ಯಾಚಾರ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದಿಂದ ವಜಾಗೊಂಡಿದ್ದ ಮಾಜಿ ಸಚಿವ ಸಂದೀಪ್ ಕುಮಾರ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಒಂದು ಲಕ್ಷ ವಯಕ್ತಿಕ ಬಾಂಡ್ ಹಾಗೂ ಶ್ಯೂರಿಟಿ ಪಡೆದಿರುವ ನ್ಯಾಯಾಲಯ ಸಾಕ್ಷಿ ನಾಶ ಪಡಿಸದಂತೆ ತಾಕೀತು ಮಾಡಿದೆ.
ಸಂದೀಪ್ ಕುಮಾರ್ ಅವರನ್ನು ಸೆಪ್ಟಂಬರ್ ಮೂರರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಸಾಕ್ಷಿಗಳಿಗೆ ಒತ್ತಡ ಹಾಕದಂತೆ ಹೇಳಿರುವ ನ್ಯಾಯಾಲಯ ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆದುಕೊಂಡಿದೆ.
ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಂದೀಪ್ ಕುಮಾರ್ ಗೆ ಜಾಮೀನು ನೀಡಬಾರದು ಎಂದು ಪೊಲೀಸರು ಆಕ್ಷೇಪಣೆ ವ್ಯಕ್ತ ಪಡಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆ ಆರೋಪಿ ಸಂದೀಪ್ ಕುಮಾರ್ ಕ್ಷೇತ್ರದಲ್ಲೇ ಇರುವುದರಿಂದ ಆಕೆಯ ಮೇಲೆ ಒತ್ತಡ ಹಾಗೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಪೊಲೀಸರು ವಾದಿಸಿದ್ದರು.
Advertisement