ದೆಹಲಿಯ ಸಾದರ್ ಬಜಾರ್ ನಲ್ಲಿ ಮತ್ತೆ ಭಾರಿ ಅಗ್ನಿ ದುರಂತ: ನಾಲ್ವರಿಗೆ ಗಾಯ
ನವದೆಹಲಿ: ದೆಹಲಿಯಲ್ಲಿ ಮತ್ತೆ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ಸುಮಾರು 700ಕ್ಕೂ ಅಧಿಕ ಮನೆಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ವಾಯುಮಾಲೀನ್ಯದಿಂದಾಗಿ ಸುದ್ದಿಯಲ್ಲಿರುವ ದೆಹಲಿ ಇದೀಗ ಮತ್ತೆ ಅಗ್ನಿ ದುರಂತ ಪ್ರಕರಣದಿಂದ ಸುದ್ದಿಯಲ್ಲಿದ್ದು, ದೆಹಲಿಯ ಸಾದರ್ ಬಜಾರ್ ಸ್ಲಂ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಈ ವರೆಗೂ ನಾಲ್ವರು ವ್ಯಕ್ತಿಗಳು ಗಾಯಗೊಂಡಿದ್ದು, ಸುಮಾರು 300 ಕ್ಕೂಅಧಿಕ ಮನೆಗಳು ಬೆಂಕಿಗಾಹುತಿಯಾಗಿದೆ. ಘಟನೆಯಿಂದಾಗಿ ಇಲ್ಲಿನ ಸುಮಾರು 700ಕ್ಕೂ ಅಧಿಕ ಸ್ಲಂ ನಿವಾಸಿಗಳು ಇದೀಗ ನಿರಾಶ್ರಿತರಾಗಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆಯೇ 30ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿವೆ. ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ ನಿಂದ ಆಗಿರುವ ಬೆಂಕಿ ಎಂದು ಹೇಳಲಾಗುತ್ತಿದೆಯಾದರೂ ಹೆಚ್ಚಿನ ಮಾಹಿತಿಗೆ ತನಿಖೆ ನಡೆಸಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಇದೇ ಸ್ಲಂ ನಲ್ಲಿ ಕೆಲವು ವ್ಯಕ್ತಿಗಳು ಪಟಾಕಿ ಗೋದಾಮುಗಳನ್ನು ಹೊಂದಿದ್ದರು. ಅಲ್ಲಿ ಅಪಾರ ಪ್ರಮಾಣದ ಪಟಾಕಿ ದಾಸ್ತಾನುಗಳಿದ್ದವು ಎಂದು ಹೇಳಲಾಗುತ್ತಿದೆ. ಇದೇ ಬೆಂಕಿ ವ್ಯಾಪಿಸಲು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಅಂತೆಯೇ ಬೆಂಕಿಯ ಕೆನ್ನಾಲಿಗೆಗೆ ಸ್ಲಂನ ಮನೆಗಳಲ್ಲಿದ್ದ ಕೆಲ ಗ್ಯಾಸ್ ಸಿಲಿಂಡರ್ ಗಳೂ ಕೂಡ ಸ್ಫೋಟಗೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ