ಕಪ್ಪು ಹಣದ ಮೇಲಿನ ಸೀಮಿತ ದಾಳಿಯಿಂದ ಸಾಮಾನ್ಯ ಜನರು ಸುರಕ್ಷಿತ: ಕೇಂದ್ರ ಸರ್ಕಾರ

ರು.500 ಹಾಗೂ 1,000 ನೋಟ್ ಬಂದ್ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಕಪ್ಪು ಹಣದ ವಿರುದ್ಧದ ಸೀಮಿತ ದಾಳಿಯಿಂದ...
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್

ನವದೆಹಲಿ: ರು.500 ಹಾಗೂ 1,000 ನೋಟ್ ಬಂದ್ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಕಪ್ಪು ಹಣದ ವಿರುದ್ಧದ ಸೀಮಿತ ದಾಳಿಯಿಂದ ಸಾಮಾನ್ಯ ಜನರು ಸುರಕ್ಷಿತವಾಗಿರಲಿದ್ದಾರೆಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು, ಪ್ರಧಾನಿ ಮೋದಿಯವರ ನಿರ್ಧಾರ ಭ್ರಷ್ಟರು ಹಾಗೂ ಕಪ್ಪು ಹಣವನ್ನು ಹೊಂದಿರುವವರ ಮೇಲೆ ಪರಿಣಾಮವನ್ನು ಬೀರಲಿದೆ. ಮೋದಿಯವರ ಈ ನಿರ್ಧಾರದಿಂದ ಆರ್ಥಿಕ ವಲಯದಲ್ಲಿ ದೊಡ್ಡ ಬೆಳವಣಿಗೆಗಳೇ ಕಂಡು ಬರಲಿದೆ. ಭ್ರಷ್ಟರ ವಿರುದ್ಧ ನಾವು ಕ್ರಮಕೈಗೊಳ್ಳಲಿದ್ದೇವೆಂದು ಹೇಳಿದ್ದಾರೆ.

ದೇಶದಲ್ಲಿರುವ ಭ್ರಷ್ಟಚಾರವೆಂಬ ಕ್ಯಾನ್ಸರ್ ಇದೀಗ ನಿವಾರಣೆಯಾಗದಲಿದೆ. ಪ್ರತೀಯೊಂದು ಹಣಕ್ಕೂ ಇಂದು ತೆರಿಗೆ ಕಟ್ಟಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿಯೇ ಪ್ರಧಾನಿ ಮೋದಿಯವರ ಈ ಹೆಜ್ಜೆಯನ್ನು ಐತಿಹಾಸಿಕ ಹಾಗೂ ಕ್ರಾಂತಿಕಾರಿ ತೀರ್ಮಾನವೆಂದು ಹೇಳಲಾಗುತ್ತಿದೆ. ಸಾಮಾನ್ಯ ಜನರ ಬಳಿಯಷ್ಟೇ ವೈಟ್ ಮನಿ ಇರುತ್ತದೆ. ಕೆಲ ಬೆಳವಣಿಗೆಗಳಿಂದಾಗಿ ಸಣ್ಣ ವ್ಯಾಪಾರಿಗಳ, ಮದುವೆ ಸಮಾರಂಭ ನಡೆಸುತ್ತಿರುವವರ ಮೇಲೆ ಪರಿಣಾಮ ಬೀರಲಿದೆ. ಕಾಲ ಕಳೆಯುತ್ತಿದ್ದಂತೆ ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com