ಕಪ್ಪು ಹಣದ ವಿರುದ್ಧದ ಹೋರಾಟ ಸೀಮಿತ ದಾಳಿಗಿಂತಲೂ ಕಡಿಮೆಯಿಲ್ಲ: ಅಮಿತ್ ಶಾ

ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕಠಿಣ ನಿರ್ಧಾರವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸ್ವಾಗತಿಸಿದ್ದು, ಇಂದು ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ನಡೆಸಿರುವ ದಾಳಿ ಸೀಮಿತ ದಾಳಿಗಿಂತಲೂ ಕಡಿಮೆಯಿಲ್ಲ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ನವದೆಹಲಿ: ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕಠಿಣ ನಿರ್ಧಾರವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸ್ವಾಗತಿಸಿದ್ದು, ಇಂದು ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ನಡೆಸಿರುವ ದಾಳಿ ಸೀಮಿತ ದಾಳಿಗಿಂತಲೂ ಕಡಿಮೆಯಿಲ್ಲ ಎಂದು ಬುಧವಾರ ಹೇಳಿದ್ದಾರೆ.

ರು.500 ಹಾಗೂ 1,000 ನೋಟ್ ಗಳ ಬಂದ್ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತಿದ್ದೇನೆ. ಪ್ರಧಾನಿ ಮೋದಿಯವರು ಈ ನಿರ್ಧಾರಕ್ಕೆ ಶುಭಾಶಯಗಳನ್ನು ಹೇಳಲು ಇಚ್ಛಿಸುತ್ತೇನೆ. ಕಪ್ಪು ಹಣದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದುವರೆಸಲಿದ್ದಾರೆ. ಕೇಂದ್ರ ಈ ದಾಳಿ ಸೀಮಿತ ದಾಳಿಗಿಂತಲೂ ಕಡಿಮೆಯಿಲ್ಲ. ಮೋದಿಯವರ ಈ ನಿರ್ಧಾರ ಕೇವಲ ಕಪ್ಪು ಹಣವನ್ನು ಹೊಂದಿರುವವರಿಗಷ್ಟೇ ಅಲ್ಲದೆ, ನಕಲಿ ನೋಟ್ ಗಳನ್ನು ಹೊಂದಿ ವ್ಯವಹಾರ ಮಾಡುತ್ತಿರುವವರ ಮೇಲೂ ಪರಿಣಾಮ ಬೀರಲಿದೆ. ಕಪ್ಪುಹಣವನ್ನು ಹೊಂದಿರುವವರಿಗೆ ಇದೊಂದು ಕಠಿಣ ಸಂದೇಶವನ್ನು ರವಾನೆ ಮಾಡಿದಂತಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com