ನೋಟು ರದ್ದು ಹಿಂದೆ ಹಗರಣ: ಕೇಜ್ರಿವಾಲ್ ಹತಾಶ ಹೇಳಿಕೆ- ಸುಖ್ಬೀರ್ ಬಾದಲ್

ಹತಾಶೆ ಭಾವದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದುಬಾರಿ ಬೆಲೆ ನೋಟು ನಿಷೇಧ ಹಿಂದೆ ದೊಡ್ಡ ಹಗರಣವಿದೆ ಎಂದು ಹೇಳುತ್ತಿದ್ದಾರೆಂದು ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್...
ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್
ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್
ಲುಧಿಯಾನ: ಹತಾಶೆ ಭಾವದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದುಬಾರಿ ಬೆಲೆ ನೋಟು ನಿಷೇಧ ಹಿಂದೆ ದೊಡ್ಡ ಹಗರಣವಿದೆ ಎಂದು ಹೇಳುತ್ತಿದ್ದಾರೆಂದು ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರು ಶನಿವಾರ ಹೇಳಿದ್ದಾರೆ. 
ಕೇಜ್ರಿವಾಲ್ ಅವರ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವನರು, ಪಂಜಾಬ್ ಚುನಾವಣೆ ಹತ್ತಿರ ಬರುತ್ತಿದ್ದು, ಬ್ಯಾಗ್ ಗಳಲ್ಲಿ ಹಣವನ್ನು ಶೇಖರಿಸಿಟ್ಟಿರಬೇಕು. ಹೀಗಾಗಿಯೇ ಕೇಜ್ರಿವಾಲ್ ಅವರು, ರು.1000 ನೋಟುಗಳ ಮೇಲೆ ನಿಷೇಧ ಬೇಡ ಎಂದು ಹೇಳುತ್ತಿದ್ದಾರೆ. ಇದೀಗ ಶೇಖರಿಸಿಟ್ಟ ಹಣವೆಲ್ಲ ವ್ಯರ್ಥವಾಗಿದ್ದು, ಹತಾಶೆ ಹಾಗೂ ಭಯದಿಂದ ಕೇಜ್ರಿವಾಲ್ ಈ ರೀತಿಯಾಗಿ ಮಾತನಾಡುತ್ತಿದ್ದಾರೆಂದು ಹೇಳಿದ್ದಾರೆ. 
ರು.500 ಹಾಗೂ 1,000 ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಕೇಂದ್ರ ಸರ್ಕಾರ ನಿರ್ಧಾರದ ಕುರಿತಂತೆ ಈ ಹಿಂದೆ ಕಿಡಿಕಾರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹೆಸರಿನಲ್ಲಿ ಎನ್ ಡಿಎ ಸರ್ಕಾರ ದೊಡ್ಡ ಹಗರಣ ನಡೆಸಿದ್ದು, ಪ್ರಧಾನಿ ಮೋದಿ ಈ ನಿರ್ಧಾರವನ್ನು ಘೋಷಿಸುವುದಕ್ಕೂ ಮುನ್ನವೇ ಕಪ್ಪುಹಣ ಹೊಂದಿರುವ ತಮ್ಮ ಕೆಲವು ಆಪ್ತರಿಗೆ ಮಾಹಿತಿಯನ್ನು ನೀಡಿದ್ದರು, ಆದ್ದರಿಂದ ಕೇಂದ್ರ ಸರ್ಕಾರದ ನೋಟ್ ರದ್ದತಿಯಿಂದ ಉಂಟಾಗಬೇಕಿದ್ದ ಪರಿಣಾಮದಿಂದ ಭ್ರಷ್ಟರು, ಕಪ್ಪುಹಣ ಹೊಂದಿರುವವರು ತಪ್ಪಿಸಿಕೊಂಡಿದ್ದಾರೆಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com