ಗುರುನಾನಕ್ ಜಯಂತಿ: ಸೋಮವಾರ ಅಂಚೆ ಕಚೇರಿಗೆ, ಬ್ಯಾಂಕ್ ಗಳಿಗೆ ರಜೆ ಇಲ್ಲ!

ನೋಟುಗಳ ನಿಷೇಧದ ಹಿನ್ನಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರ ರಜೆಗಳಿಗೆ ಕೇಂದ್ರ ಸರ್ಕಾರ ನಾಳಿನ ಗುರುನಾನಕ್ ಜಯಂತಿ ರಜೆಗೂ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ಕಾರ್ಯ ನಿರ್ವಹಣೆ (ಸಂಗ್ರಹ ಚಿತ್ರ)
ಬ್ಯಾಂಕ್ ಕಾರ್ಯ ನಿರ್ವಹಣೆ (ಸಂಗ್ರಹ ಚಿತ್ರ)

ನವದೆಹಲಿ: ನೋಟುಗಳ ನಿಷೇಧದ ಹಿನ್ನಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರ ರಜೆಗಳಿಗೆ ಕೇಂದ್ರ ಸರ್ಕಾರ ನಾಳಿನ ಗುರುನಾನಕ್ ಜಯಂತಿ ರಜೆಗೂ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದಾಗಿನಿಂದಲೂ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಬಿಕ್ಕಟ್ಟನ್ನು ಎದುರಿಸುವ ನಿಟ್ಟಿನಲ್ಲಿ ಬ್ಯಾಂಕ್  ನೌಕರರ ರಜೆಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ನೋಟು ನಿಷೇಧದ ಬಳಿಕ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ನಾಳೆ ಗುರುನಾನಕ್ ಜಯಂತಿ ಕುರಿತಂತೆ  ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಅಂಚೆ ಕಚೇರಿ, ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದೆ.

ಇನ್ನು ನಾಳೆ ಗುರುನಾನಕ್ ಜಯಂತಿ ಹಿನ್ನಲೆಯಲ್ಲಿ ಬ್ಯಾಂಕುಗಳು ಬಂದ್ ಆಗುತ್ತವೆ ಎಂದು ಕಂಗಾಲಾಗಿರುವ ಗ್ರಾಹಕರು ಇಂದೇ ಹೊಸ ನೋಟುಗಳಿಗಾಗಿ ಬ್ಯಾಂಕ್ ಗಳಿಗೆ ಮುಗಿಬಿದಿದ್ದು, ಗ್ರಾಹಕರ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್ ನೌಕರರ ರಜೆಗೆ ಬ್ರೇಕ್ ಹಾಕಿದೆ. ಪ್ರತೀ ವರ್ಷ ನವೆಂಬರ್ 14ರಂದು ಗುರುನಾನಕ್ ಜಯಂತಿ ಆಚರಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಪ್ರಸ್ತುತ  ಆರ್ಥಿಕ ಬಿಕ್ಕಟ್ಟು ಇರುವ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರ ನಾಳಿನ ರಾಜೆಗೆ ಬ್ರೇಕ್ ಹಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com