ನೋಟಿನ ಮೇಲೆ ನಿಷೇಧ: ಸಂಸತ್ತಿನಲ್ಲಿ ಕಾಂಗ್ರೆಸ್'ಗೆ ದಿಟ್ಟ ಉತ್ತರ ನೀಡುತ್ತೇವೆ- ಕೇಂದ್ರ

ದುಬಾರಿ ನೋಟಿನ ಮೇಲೆ ನಿಷೇಧ ಹೇರಿರುವ ನಿರ್ಧಾರದ ಕುರಿತಂತೆ ಟೀಕೆ ಮಾಡುತ್ತಿರುವ ಪ್ರತಿಪಕ್ಷಕ್ಕೆ ಸಂಸತ್ತಿನಲ್ಲಿ ದಿಟ್ಟ ಉತ್ತರವನ್ನು ನೀಡುತ್ತೇವೆಂದು ಕೇಂದ್ರ ಸರ್ಕಾರ ಭಾನುವಾರ...
ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು
ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು

ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರಿರುವ ನಿರ್ಧಾರದ ಕುರಿತಂತೆ ಟೀಕೆ ಮಾಡುತ್ತಿರುವ ಪ್ರತಿಪಕ್ಷಕ್ಕೆ ಸಂಸತ್ತಿನಲ್ಲಿ ದಿಟ್ಟ ಉತ್ತರವನ್ನು ನೀಡುತ್ತೇವೆಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ ಬಳಿದ ಸಾಕಷ್ಟು ಜನರಿಗೆ ತೊಂದರೆ ಎದುರಾಗಿದೆ. ಆದರೆ, ಈ ನಿರ್ಧಾರ ಭಯೋತ್ಪಾದನೆ ಅಭಿವೃದ್ಧಿಗೆ, ಕಪ್ಪುಹಣ, ಖೋಟಾನೋಟು ಹಾಗೂ ಅಕ್ರಮ ವಹಿವಾಟಿಗಳನ್ನು ಸ್ಥಗಿತಗೊಳಿಸಿದೆ ಎಂದಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಸಂಸತ್ತಿನಲ್ಲಿ ಅಧಿವೇಶನ ನಡೆಸುತ್ತಿರು ವೇಳೆ ಯಾವುದೇ ವಿಚಾರಗಳು ಬಂದರೂ ಅದಕ್ಕೆ ಉತ್ತರ ನೀಡಬೇಕಾದದ್ದೂ ಸರ್ಕಾರ ಆದ್ಯಕರ್ತವ್ಯವಾಗಿದ್ದು, ಒಂದು ವೇಳೆ ಪ್ರತಿಪಕ್ಷಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇ ಆದರೆ, ಆದಕ್ಕೆ ನಾವು ಉತ್ತರವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರತಿಪಕ್ಷಗಳ ಬಳಿ ಮನವಿ ಮಾಡಿರುವ ಅವರು, ರಾಜಕೀಯ ಮಾಡಲು ಇದು ಸರಿಯಾದ ಸಮಯವಲ್ಲ. ಭಯೋತ್ಪಾದನೆ ಹಾಗೂ ಭ್ರಷ್ಟಾಚಾರದ ವಿರುದ್ಧ ದೇಶ ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com